ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ವೈದ್ಯ ಅರೆಸ್ಟ್  

(ನ್ಯೂಸ್ ಕಡಬ) newskadaba.com  ಚೆನ್ನೈ, ಸೆ. 5. ತಿರುಚ್ಚಿಯ ಸರ್ಕಾರಿ ಅನುದಾನಿತ ಶಾಲಾ ಹಾಸ್ಟೆಲ್‌ ನಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವೈದ್ಯನೋರ್ವನನ್ನು ಬಂಧಿಸಲಾಗಿದೆ. ಎಸ್ ಸ್ಯಾಮ್ಸನ್ ಡೇನಿಯಲ್(31) ಬಂಧಿತ ವೈದ್ಯ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

2017ರಲ್ಲಿ ಪುದುಚೇರಿಯಿಂದ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದ ನಂತರ 2021ರಲ್ಲಿ ತನ್ನ ಸರ್ಕಾರಿ ಸೇವೆಯನ್ನು ಪ್ರಾರಂಭಿಸಿದ್ದ ಆರೋಪಿ ಸ್ಯಾಮ್ಸನ್, ತಿರುಚಿರಾಪಳ್ಳಿಗೆ ವರ್ಗಾವಣೆಯಾಗುವ ಮೊದಲು ತೂತುಕುಡಿಯಲ್ಲಿದ್ದನು ಎನ್ನಲಾಗಿದೆ. ಸ್ಯಾಮ್ಸನ್‌ನ ತಾಯಿ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾಗಿದ್ದರು. ಸ್ಯಾಮ್ಸನ್‌ ವೈದ್ಯಕೀಯ ಸೇವೆ ನೀಡುನೀಡುವ ನೆಪದಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಕಿರುಕುಳ ನೀಡಲು ತನ್ನ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Also Read  ಮಂಗಳೂರು ಗಾಂಜಾ ಪೂರೈಕೆ ಪಕರಣ ➤ಕಾರಾಗೃಹದ ಸಿಬ್ಬಂದಿ ಅಮಾನತು

 

error: Content is protected !!
Scroll to Top