ಈ ಬಾರಿ ವಿಜೃಂಭಣೆಯ ಶಿಸ್ತು ಬದ್ಧ  ದಸರಾ ಆಚರಣೆ: 19 ಉಪ ಸಮಿತಿಗಳ ರಚನೆ ಸಚಿವ ಎಚ್.ಸಿ.ಮಹದೇವಪ್ಪ

(ನ್ಯೂಸ್ ಕಡಬ) newskadaba.com  ಮೈಸೂರು, ಸೆ. 5. ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು, ಯಾವ ಲೋಪವಾಗದಂತೆ ಶಿಸ್ತು ಬದ್ಧವಾಗಿ ದಸರಾ ಆಚರಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.


ಅರಮನೆ ಮಂಡಳಿ ಕಚೇರಿಯಲ್ಲಿ ದಸರಾ ಉಪ ಸಮಿತಿ ಅಧಿಕಾರಿಗಳ ಸಭೆ ಜೊತೆ ಸುದೀರ್ಘ ಸಭೆ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ದಸರಾ ಆಚರಣೆ ಸಂಬಂಧ 19 ಉಪ ಸಮಿತಿಗಳನ್ನು ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದೆ, ಕ್ರೀಡೆ, ಸಾಂಸ್ಕೃತಿಕ, ಫಲಪುಷ್ಪ, ಕುಸ್ತಿ, ಯುವ ದಸರಾ ಸೇರಿದಂತೆ ಹಲವು ಉಪಸಮಿತಿಗಳನ್ನು ಮಾಡಲಾಗಿದೆ. ಅವರ ಕಾರ್ಯ ವೈಖರಿ, ಅವರ ಜವಾಬ್ದಾರಿಗಳು ಏನು ಎಂಬುದರ ಬಗ್ಗೆ ಚರ್ಚೆ ಮಾಡಿ ನಿರ್ದೇಶನ ನೀಡಲಾಗಿದೆ. ಕಳೆದ ಬಾರಿ ದಸರಾ ಆಚರಣೆ ಮಾಡಿದ ಅನುಭವವನ್ನು ಬಳಸಿಕೊಂಡು, ತಪ್ಪಾಗಿದ್ದರೆ ಸರಿಪಡಿಸಿಕೊಂಡು ಉತ್ತಮವಾಗಿ ಯಾವ ಲೋಪ ಆಗದಂತೆ ಶಿಸ್ತು ಬದ್ಧವಾಗಿ ದಸರಾ ಆಚರಣೆ ಮಾಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು ಎನ್ನಲಾಗಿದೆ.

Also Read  ಚೂರಿಯಿಂದ ಇರಿದು ಯುವಕನ ಕೊಲೆ  

 

error: Content is protected !!
Scroll to Top