ಆಲಂಕಾರು: ಶ್ರೀ ಕೃಷ್ಣಾಅಷ್ಟಮಿ ಅಟ್ಟಿ ಮಡಿಕೆ ಉತ್ಸವ

(ನ್ಯೂಸ್ ಕಡಬ) newskadaba.com ಕಡಬ, ಸೆ. 05. ಆಲಂಕಾರು ಗ್ರಾಮದ ಹಿಂದೂ ಜಾಗರಣ ವೇದಿಕೆ ಘಟಕ ಹಾಗೂ ಆಲಂಕಾರು ಮೊಸರು ಕುಡಿಕೆ ಉತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಟಾಷ್ಟಮಿ ಅಟ್ಟಿ ಮಡಿಕೆ ಒಡೆಯುವ ಉತ್ಸವವು ಆಲಂಕಾರಿನಲ್ಲಿ ಸೆಪ್ಟೆಂಬರ್ 1ರಂದು ನಡೆಯಿತು.

ಆಲಂಕಾರು ಪೇಟೆಯಲ್ಲಿ ಆಲಂಕಾರು ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಪ್ರಭು ದೀಪ ಬೆಳಗಿಸಿ ಉದ್ಟಾಟಿಸಿದರು. ಬಳಿಕ  ಆಲಂಕಾರು ಪೇಟೆಯ ವಿವಿದೆಡೆ  ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ನಡೆಯಿತು. ಸುಮಾರು 12 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರಥಮ ಸ್ಥಾನವನ್ನು ಲಕ್ಷ್ಮೀ ಜನಾರ್ಧನ ಕೇಪು, ದ್ವಿತೀಯ ಸ್ಥಾನವನ್ನು ಬುಡೇರಿಯಾ ಹಾಗೂ ರೆಂಜಾಳ ತಂಡ ಹಂಚಿಕೊಂಡವು. ತೃತೀಯ  ಸ್ಥಾನವನ್ನು ಕಲ್ಲುಗುಡ್ಡೆ, ಚತುರ್ಥ ಸ್ಥಾನವನ್ನು ಸುಳ್ಯ ತನ್ನದಾಗಿಸಿಕೊಂಡವು.

Also Read  ಕಡಬದ ಸಸ್ಯಾಹಾರಿ ಮತ್ತು ಮಾಂಸಹಾರಿ ಹೊಟೇಲ್ ಬಿರಿಯಾನಿ ಹೌಸ್ ಪುನರಾರಂಭ ➤ಲಾಕ್ಡೌನ್ ಹಿನ್ನೆಲೆ ಲಾಕ್ ಆಗಿದ್ದ ಹೊಟೇಲ್

ಬಳಿಕ ಶ್ರೀ ದುರ್ಗಾಂಬ ಕ್ರೀಡಾಂಗಣದಲ್ಲಿ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಾಲಯದ ವ್ಯವಸ್ಥಾಪನಾ ಸಮಿತಿ  ಸದಸ್ಯ ಗಣೇಶ್ ಹಿರಿಂಜ  ಅಧ್ಯಕ್ಷತೆಯಲ್ಲಿ ಸಮರೋಪ ಸಮಾರಂಭ ನಡೆಯಿತು. ಶ್ರೀ ಭಾರತಿ ಶಾಲಾ ಶಿಕ್ಷಕ ಚಂದ್ರಹಾಸ ಕುಂಟ್ಯಾನರವರು ದಿಕ್ಸೂಚಿ ಭಾಷಣ ಮಾಡಿದರು. ಮೊಸರು ಕುಡಿಕೆ ಉತ್ಸವ  ಸಮಿತಿ  ಅಧ್ಯಕ್ಷ ಜನಾರ್ಧನ ಗೌಡ ಕಯ್ಯಪ್ಪೆ ಉಪಸ್ಥಿತಿತರಿದ್ದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ಸದಸ್ಯ ಜಗನ್ನಾಥ ರೈ ಬಳಂಪೋಡಿ ಅವರನ್ನು ಸನ್ಮಾನಿಸಲಾಯಿತು. ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಗೌರವಿಸಲಾಯಿತು. ಮುದ್ದು ಕೃಷ್ಣ ಸ್ಫರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಹಾಗೂ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಶಿಕ್ಷಕ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಜನಾರ್ಧನ ಗೌಡ ಕಯ್ಯಪ್ಪೆ ವಂದಿಸಿದರು.

error: Content is protected !!
Scroll to Top