ಇನ್ಮುಂದೆ ವಾಹನಗಳಲ್ಲಿ ಸ್ಟಿಕ್ಕರ್ ಹಾಕಿಸಿದ್ರೆ ಬೀಳುತ್ತೆ ದಂಡ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 05. ಇನ್ನುಮುಂದೆ ವಾಹನಗಳಲ್ಲಿ ಇಷ್ಟಬಂದಂತೆ ಸ್ಟಿಕ್ಕರ್‌ ಗಳನ್ನ ಹಾಕಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಿ. ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದ್ದಾರೆ.

ಈ ಮೊದಲೇ ಸಾರಿಗೆ ಇಲಾಖೆಯ ಸಂಚಾರಿ ನಿಯಮಗಳ ಪ್ರಕಾರ ಈ ರೀತಿಯ ಸ್ಟಿಕ್ಕರ್ ಅಳವಡಿಕೆಗೆ ನಿಷೇಧವಿತ್ತಾದರೂ, ವಾಹನಗ ಮೇಲೆ, ಮನೆಯರ ಹೆಸರು, ದೇವರ ಹೆಸರು, ಸಿನಮಾ ನಟ ನಟಿಯರ ಹೆಸರು ಸ್ಟಿಕ್ಕರ್ ಮಾಡಿಸುವುದು ಸಾಮಾನ್ಯವಾಗಿತ್ತು. ಆದರೆ ಪ್ರಸ್ರುತ ದಿನಗಳಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಅಭಿಮಾನಿಗಳು ವಾಹನಗಳ ಮೇಲೆ ಕೈದಿ ನಂಬರ್ 511 ಎಂದು ಸ್ಟಿಕ್ಕರ್ ಅಂಟಿಸಿ ಹುಚ್ಚಾಟಗಳನ್ನು ಮೆರೆದಿದ್ದರು. ಇದಕ್ಕೆಲ್ಲ ಬ್ರೇಕ್ ಹಾಕುವ ಉದ್ದೇಶದಿಂದ ಸಾರಿಗೆ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಇನ್ಮುಂದೆ ಗಾಡಿಗಳ ಮೇಲೆ ಈ ರೀತಿಯ ಸ್ಟಿಕ್ಕರ್ ಕಂಡು ಬಂದಲ್ಲಿ ಒಂದೆರೆಡು ಬಾರಿ ವಾರ್ನಿಂಗ್ ನೀಡಿ, ಆ ನಂತರವೂ ಸ್ಟಿಕ್ಕರ್‌ ಗಳನ್ನ ತೆಗೆಸಿಲ್ಲವಾದಲ್ಲಿ, ದಂಡ ವಿಧಿಸುವುದರ ಜೊತೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಿ.ಮಲ್ಲಿಕಾರ್ಜುನ ಎಚ್ಚರಿಗೆ ನೀಡಿರುವುದಾಗಿ ಮಾಧ್ಯಮ ಮೂಲಗಳು ತಿಳಿಸಿವೆ.

error: Content is protected !!
Scroll to Top