3ನೇ ಪ್ರಯತ್ನದಲ್ಲಿ ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಶಿವಿಕಾ ಹನ್ಸ್

(ನ್ಯೂಸ್ ಕಡಬ) newskadaba.com  ಪಂಜಾಬ್, ಸೆ. 5. ಯುಪಿಎಸ್‌ಸಿ ಪರೀಕ್ಷೆ ಅದೆಷ್ಟೋ ಜನರ ಕನಸಾಗಿರುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಅಷ್ಟು ಸುಲಭದ ಮಾತಲ್ಲ. ಹೀಗೆ ತಮ್ಮ ಎರಡು ಪ್ರಯತ್ನಗಳ ಬಳಿಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಶಿವಿಕಾ ಹನ್ಸ್ ಅವರ ಸ್ಫೂರ್ತಿದಾಯಕ ಕಥೆ ಇದು.

ಶಿವಿಕಾ ಹನ್ಸ್ ಅವರು ಪಂಜಾಬ್ ನ ಪಟಿಯಾಲಾದ ರಾಜಪುರ ನಗರದ ನಿವಾಸಿಯಾಗಿದ್ದಾರೆ. ಶಿವಿಕಾ ಅವರ ತಂದೆ ರಾಜಪುರದಲ್ಲಿ ಫೋಟೋಗ್ರಫಿ ಮಳಿಗೆ ಹೊಂದಿದ್ದಾರೆ ಮತ್ತು ಅವರ ತಾಯಿ ಗೃಹಿಣಿ. ಅವರಿಗೆ ಕಿರಿಯ ಸಹೋದರ ಮತ್ತು ಸಹೋದರಿ ಇದ್ದಾರೆ. ಶಿವಿಕಾ ಅವರು 10ನೇ ತರಗತಿ ಓದುತ್ತಿರುವಾಗಲೇ ಐಎಎಸ್ ಆಗುವ ಕನಸು ಕಂಡಿದ್ದರು. ಈ ಕನಸನ್ನು ನನಸು ಮಾಡಿಕೊಳ್ಳಲು ತಯಾರಿ ಆರಂಭಿಸಿದರು. ಈ ವೇಳೆ ಶಿವಿಕಾ ಪೋಷಕರೂ ಅವರಿಗೆ ಸಂಪೂರ್ಣ ಬೆಂಬಲ ನೀಡಿದರು. ಅವರು ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಶಿವಿಕಾ ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರು. ಬಳಿಕ 2023 ರಲ್ಲಿ 3ನೇ ಬಾರಿಗೆ ಸ್ವಯಂ ಅಧ್ಯಯನದ ಮೂಲಕ ಪರೀಕ್ಷೆ ಬರೆದ ಅವರು, ಉತ್ತೀರ್ಣರಾಗುವುದರೊಂದಿಗೆ 300ನೇ ರ‍್ಯಾಂಕ್ ಗಳಿಸುತ್ತಾರೆ.

Also Read  ಮಂಗಳೂರಿನಲ್ಲಿ ಮತ್ತೊಂದು ದೋಣಿ ದುರಂತ ➤ 6 ಮಂದಿ ಮೀನುಗಾರರು ನಾಪತ್ತೆ!

 

 

error: Content is protected !!
Scroll to Top