(ನ್ಯೂಸ್ ಕಡಬ) newskadaba.com ಫರಂಗಿಪೇಟೆ, ಸೆ. 05. ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ಹಳೆಯದಾದ ದೊಡ್ಡ ಮರಗಳ ಕೊಂಬೆಗಳು ಅಪಾಯಕಾರಿಯಾಗಿದ್ದು, ಗಾಳಿ ಮಳೆಗೆ ತುಂಡಾಗಿ ಬೀಳುವ ಸಾಧ್ಯತೆಯಿದೆ. ಇದರಿಂದ ಜನಸಾಮಾನ್ಯರು ಭಯದಿಂದ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಅಪಾಯಕಾರಿಯಾದ ಮರದ ಕೊಂಬೆಗಳನ್ನು ಕಡಿಯಬೇಕೆಂದು ಎಸ್ಡಿಪಿಐ ನಿಯೋಗವು ಪುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಭೇಟಿ ನೀಡಿ ಮನವಿಯನ್ನು ಸಲ್ಲಿಸಿತು.
ಎಸ್ಡಿಪಿಐ ಪುದು ಗ್ರಾಮ ಸಮಿತಿ ಅಧ್ಯಕ್ಷ ಅಹಮದ್ ಬಶೀರ್, ಕಾರ್ಯದರ್ಶಿ ಅನ್ಸಾರ್ ಅಮ್ಮೆಮ್ಮಾರ್, ಉಪಾಧ್ಯಕ್ಷ ಸಿದ್ದೀಕ್ ಫರಂಗಿಪೇಟೆ, ಸದಸ್ಯರಾದ ಸಿರಾಜ್ ಕುಂಪನಮಜಲ್, ಇರ್ಫಾನ್, ಆಶ್ರಫ್ ಮತ್ತಿತರರು ನಿಯೋಗದಲ್ಲಿದ್ದರು.