ಮದುವೆಯಾಗಲು ನಿರಾಕರಿಸಿದ ಪ್ರಿಯತಮೆಯ ಕೊಲೆ..! ಆರೋಪಿಗೆ ಜೀವವಾಧಿ ಶಿಕ್ಷೆ..!

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 5. ಮದುವೆಯಾಗಲು ನಿರಾಕರಿಸಿದ ಪ್ರಿಯತಮೆಯನ್ನು ಕೊಂದ ಆರೋಪಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.  ಆರೋಪಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೋಟಗಿ ತಾನದ ಮೂಲದ ಸಂದೀಪ್ ರಾಥೋಡ್ (23)  ಎಂದು ಗುರುತಿಸಲಾಗಿದೆ.

ಮೃತ ಅಂಜನಾ ವಸಿಷ್ಟ ಎಂಬಾಕೆಯನ್ನು 2018ರಲ್ಲಿ ಫೇಸ್‌ಬುಕ್ ಮೂಲಕ ಭೇಟಿಯಾಗಿದ್ದ.ಅವರ ಸ್ನೇಹ ಅಂತಿಮವಾಗಿ ಪ್ರಣಯ ಸಂಬಂಧವಾಗಿ ಬೆಳೆದು ನಂತರ ಇಬ್ಬರೂ ಮದುವೆಯಾಗಲು ಯೋಜಿಸಿದ್ದರು. ಈ ವೇಳೆ ರಾಥೋಡ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಲಿಖಿತ ಪರೀಕ್ಷೆ ಬರೆಯಲು ಮಂಗಳೂರಿಗೆ ಬಂದಿದ್ದರು. ಅಂಜನಳನ್ನು ಕರೆದುಕೊಂಡು ಬಂದು ಅತ್ತಾವರ ಆರನೇ ಕ್ರಾಸ್‌ ನಲ್ಲಿರುವ ಪೈಸ್ ಕಾಟೇಜ್‌ ನಲ್ಲಿ ತಂಗಿದ್ದು, ಅವಳು ತನ್ನ ನಿರ್ಧಾರವನ್ನು ರಾಥೋಡ್‌ ಗೆ ತಿಳಿಸಿದಳು ಮತ್ತು ಮುಂದುವರಿಯುವಂತೆ ಕೇಳಿಕೊಂಡಳು. ಕೋಪಗೊಂಡ ರಾಥೋಡ್ ಆಕೆಯನ್ನು ಕೊಲ್ಲಲು ಸಂಚು ರೂಪಿಸಿ ಜೂನ್ 7, 2019 ರಂದು ಅತ್ತಾವರದಲ್ಲಿರುವ ತನ್ನ ನಿವಾಸಕ್ಕೆ ಅವಳನ್ನು ಕರೆದೊಯ್ದು ತೀವ್ರ ವಾಗ್ವಾದದ ಸಮಯದಲ್ಲಿ, ಅವನು ಟಿವಿ ಕೇಬಲ್‌ ನಿಂದ ಆಕೆಯ ಕತ್ತು ಹಿಸುಕಿ ಸ್ಥಳದಿಂದ ಪರಾರಿಯಾಗಿದ್ದನು. ಬಳಿಕ ಸಿಂದಗಿಯಲ್ಲಿ ಆತನನ್ನು ಬಂಧಿಸಲಾಯಿತು ಎನ್ನಲಾಗಿದೆ.

Also Read  ರಾಜಕೀಯದಿಂದ ನಿವೃತ್ತಿ ಘೋಷಿಸಿದ ಎಸ್.ಅಂಗಾರ

 

error: Content is protected !!
Scroll to Top