ಕ್ಷುಲ್ಲಕ ಕಾರಣಕ್ಕಾಗಿ ಯುವಕ ನೇಣು ಬಿಗಿದು ಆತ್ಮಹತ್ಯೆ ► ಕಾರಣ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು..!

(ನ್ಯೂಸ್ ಕಡಬ) newskadaba.com ಹೆಬ್ರಿ, ಫೆ.27. ಕ್ಷುಲ್ಲಕ ಕಾರಣಕ್ಕಾಗಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಚ್ಚೂರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಹೆಬ್ರಿ ಸಮೀಪದ ಕುಚ್ಚೂರು ಗ್ರಾಮದ ಕೆಳಬಾದ್ಲು ನಿವಾಸಿ ಶೇಖರ ಎಂಬವರ ಪುತ್ರ ಮಂಜುನಾಥ್ (23) ಎಂದು ಗುರುತಿಸಲಾಗಿದೆ. ಮದ್ಯ ಸೇವನೆ ಮಾಡಿ ಮನೆಗೆ ಬಂದು ಟಿ.ವಿ. ನೋಡುತ್ತಿದ್ದ ಮಂಜುನಾಥನಲ್ಲಿ ಆತನ ತಂದೆ ಶೇಖರ್ ಅವರು ಟಿವಿಯ ಶಬ್ದವನ್ನು ಕಡಿಮೆ ಮಾಡುವಂತೆ ಹೇಳಿದ್ದಾರೆ. ಅಷ್ಟಕ್ಕೇ ಬೇಸರಗೊಂಡ ಮಂಜುನಾಥ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಪೇಜಾವರ ಶ್ರೀ ನಿಧನ: ಅಜ್ಜರಕಾಡು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ

error: Content is protected !!