ಕಡಬ: ಪ್ರಾಥಮಿಕ ಶಾಲಾ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅನ್ಯಾಯದ ಆರೋಪ- ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ SDMC ಸಮಿತಿ

(ನ್ಯೂಸ್ ಕಡಬ) newskadaba.com ಕಡಬ, ಸೆ. 04. ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಹಾಗೂ ಇಲ್ಲಿನ ಸೈಂಟ್ ಜೋಕಿಮ್ಸ್ ಹಾಗೂ ಸೈಂಟ್ ಆನ್ಸ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಮೊಗೇರಡ್ಕ ಸರಕಾರಿ ಶಾಲೆಯ ಖಾಸಗಿ ತರಬೇತುದಾರರನ್ನು ಪಂದ್ಯಾಟದ ವೇಳೆ ಅಂಕಣದೊಳಗೆ ಬಿಡದೆ ಇತರ ದೈಹಿಕ ಶಿಕ್ಷಣ ಶಿಕ್ಷಕರಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಮೊಗೆರಡ್ಕ ಶಾಲಾ ಎಸ್.ಡಿ.ಎಂ.ಸಿ. ಯವರಿಂದ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ ಕುರಿತು ವರದಿಯಾಗಿದೆ. ಅಲ್ಲದೇ ಮೊಗೇರಡ್ಕ ಶಾಲಾ ವಿದ್ಯಾರ್ಥಿಯೋರ್ವ ಸಿ.ಎಂ ಕಛೇರಿಗೂ ಕರೆ ಮಾಡಿ ಅನ್ಯಾಯವಾಗಿದೆ ಎಂದು ದೂರು ನೀಡಿದ್ದು ಈ ಆಡಿಯೋ ಕೂಡ ವೈರಲ್ ಆಗಿದೆ. ಈಗಾಗಲೇ ಈ ಬಗ್ಗೆ ವಿಚಾರಣೆ ನಡೆಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆಂದು ತಿಳಿದು ಬಂದಿದೆ.

Also Read  ಬಳ್ಪ : ಮೂರು ಪ್ರಗತಿ ಬಂಧು ಸಂಘಗಳ ಉದ್ಘಾಟನೆ

ಸೆ. 03ರಂದು ನಡೆದ ಕಬಡ್ಡಿ ಪಂದ್ಯಾಟದ ವೇಳೆ ಕೊಂಬಾರು ಮೊಗೇರಡ್ಕ ಶಾಲೆಯ ವಿದ್ಯಾರ್ಥಿಗಳ ತಂಡದ ಕೋಚ್ ಅನ್ನು ಪ್ರಾರಂಭದಲ್ಲಿ ಅಂಕಣದೊಳಗೆ ಹೋಗಲು ಅನುಮತಿ ನಿರಾಕರಿಸಲಾಗಿತ್ತು. ನಂತರ ಸ್ಥಳದಲ್ಲಿ ಮಾತಿನ ಚಕಮಕಿಗಳು ನಡೆದ ಬಳಿಕ ಅಂಕಣದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತಾದರೂ ವಿವಿಧ ಕಾರಣವೊಡ್ಡಿ ವಿದ್ಯಾರ್ಥಿಗಳಿಗೆ ಸಲಹೆ ನೀಡಲು ಕೋಚ್ ಅವರಿಗೆ ಸಾಧ್ಯವಾಗಿಲ್ಲ, ಎಂಬ ಆರೋಪ ವ್ಯಕ್ತವಾಗಿದೆ. ಅಲ್ಲದೇ ಈ ಪಂದ್ಯಾಟದಲ್ಲಿ ಎದುರಾಳಿ ತಂಡದ ಕೋಚ್ ಅವರನ್ನು ಒಳಗೆ ಬಿಡಲಾಗಿತ್ತು ಅವರು ಸಲಹೆ ನೀಡುತ್ತಿದ್ದರು ಇದೇ ವಿಚಾರ ಇದೀಗ ವಾದ ಪ್ರತಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ದೂರು ಬಂದಿಲ್ಲ, ವರದಿ ತರಿಸುತ್ತೇನೆ- ಬಿ.ಇ.ಒ
ಈ ಬಗ್ಗೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಸಂಪರ್ಕಿಸಿದಾಗ ಈ ಬಗ್ಗೆ ಯಾವುದೇ ದೂರು ಬಂದಿಲ್ಲ, ಗುರುವಾರ ವರದಿ ತರಿಸುತ್ತೇನೆ ಎಂದು ಹೇಳಿದ್ದಾರೆ. ಸಿ.ಎಂ ಕಛೇರಿಗೆ ದೂರವಾಣಿ ಕರೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರಶ್ನಿಸಿದಾಗ ಕರೆ ಯಾರು ಮಾಡಬಹುದು ಆದರೆ ದೂರು ಬರಬೇಕಲ್ಲ? ಎಂದು ಉತ್ತರಿಸಿದ್ದಾರೆ.

error: Content is protected !!
Scroll to Top