ನಿವೃತ್ತ ಡಿಸಿಪಿ ಜಿ.ಎ.ಬಾವಾರಿಗೆ ‘ವಿಶ್ವ ಮಾನ್ಯ ಕನ್ನಡಿಗ-2024’ ಗೌರವ ಪುರಸ್ಕಾರ

(ನ್ಯೂಸ್ ಕಡಬ) newskadaba.com  ವರ್ಜೀನಿಯಾ, ಸೆ. 4. ಅಮೇರಿಕ ಕನ್ನಡ ಕೂಟಗಳ ಆಗರ (ಅಕ್ಕ) ನಡೆಸುವ ಪ್ರತಿಷ್ಠಿತ 12ನೇ ವಿಶ್ವ ಕನ್ನಡ ಸಮೇಳನದಲ್ಲಿ ಅಕ್ಕ ಸಮ್ಮೇಳನ ಸಮಿತಿ ಮತ್ತು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಜಂಟಿಯಾಗಿ ಕರ್ನಾಟಕದ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ರಾಷ್ಟ್ರಪತಿಗಳ ಚಿನ್ನದ ಪದಕ ವಿಜೇತ ನಿವೃತ್ತ ಡಿಸಿಪಿ ಜಿ.ಎ.ಬಾವಾ ಅವರಿಗೆ ‘ವಿಶ್ವ ಮಾನ್ಯ ಕನ್ನಡಿಗ-2024’ ಗೌರವ ಪುರಸ್ಕಾರ ನೀಡಿ ಸನ್ಮಾನಿಸಿದೆ.


ಕರ್ನಾಟಕ ಪೋಲೀಸ್ ಇಲಾಖೆಯಲ್ಲಿ ಮೂವತ್ತಾರು ವರ್ಷಗಳ ಸುದೀರ್ಘ ಪಯಣದಲ್ಲಿ ಅಪ್ರತಿಮ ಎದೆಗಾರಿಕೆ ತೋರಿದ ಅಧಿಕಾರಿಯೆಂಬ ಹಿರಿಮೆ ಗಿಟ್ಟಿಸಿಕೊಂಡಿದ್ದ ಬಾವಾ ಅವರು ಅತ್ಯಂತ ಕಠಿಣ ಪರಿಶ್ರಮದಿಂದ ಪದವಿ ಪೂರೈಸಿದರು. 1971 ರಲ್ಲಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿ ನಂತರದ ದಿನಗಳಲ್ಲಿ ಕರ್ನಾಟಕದಾದ್ಯಂತ ಪಿಎಸ್ಐ, ಸರ್ಕಲ್ ಇನ್ಸ್ ಪೆಕ್ಟರ್, ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲೀಸ್, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಮೊದಲಾದ ಪ್ರಮುಖ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಕರ್ನಾಟಕ ಪೋಲೀಸ್ ಇಲಾಖೆಯಲ್ಲಿ ತತ್ವನಿಷ್ಠ-ಕರ್ತವ್ಯ ಪ್ರಜ್ಞೆಯ, ಅದ್ವಿತೀಯ ಕ್ರಿಯಾಶೀಲ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ.‌ ಇದೀಗ ಇಲಾಖೆಯ ನಿವೃತ್ತಿಯ ನಂತರವೂ ಸದಾ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Also Read  ಈ 4 ರಾಶಿಯವರಿಗೆ ವಿವಾಹ ಯೋಗ, ಜೀವನದ ಕಷ್ಟ ಪರಿಹಾರ ಡಿಸೆಂಬರ್ ತಿಂಗಳಿನಿಂದ ಈ ರಾಶಿಯವರ ಭವಿಷ್ಯ ತುಂಬಾ ಚೆನ್ನಾಗಿರುತ್ತದೆ

 

error: Content is protected !!
Scroll to Top