2024-25ರ ಐಎಸ್‌ಎಲ್ ಪುಟ್ಬಾಲ್ ಪಂದ್ಯಾವಳಿಗೆ ಕೆಎಂಎಫ್ ಡೈರಿ ಬ್ರ್ಯಾಂಡ್ ʼನಂದಿನಿʼ ಪ್ರಾಯೋಜಕತ್ವ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಸೆ. 4. ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ಒಡೆತನದ ಜನಪ್ರಿಯ ಡೈರಿ ಬ್ರ್ಯಾಂಡ್ ನಂದಿನಿ 2024-25ರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಪುಟ್ಬಾಲ್ ಪಂದ್ಯದ ಪ್ರಾಯೋಜಕತ್ವಕ್ಕೆ ಸಜ್ಜಾಗಿದ ಈ ಹೆಜ್ಜೆ ರಾಜ್ಯದ ಹೆಸರಾಂತ ಡೈರಿ ಬ್ರ್ಯಾಂಡ್ ನಂದಿನಿಯನ್ನು ಪ್ರಚಾರ ಮಾಡುವ ಗುರಿಯ ಭಾಗವಾಗಿದೆ ಎಂದು ಹೇಳಲಾಗಿದೆ.


ಇಂಡಿಯನ್ ಸೂಪರ್ ಲೀಗ್ ನ 11ನೇ ಸೀಸನ್ ಸೆ. 2024 ರಿಂದ ಮಾ. 2025ರವರೆಗೆ ನಡೆಯಲಿದ್ದು, ಪಂದ್ಯದಲ್ಲಿ 13 ತಂಡಗಳು ಸ್ಪರ್ಧಿಸಲಿವೆ. ಮನಿ ಕಂಟ್ರೋಲ್‌ ನ ವರದಿಯ ಪ್ರಕಾರ, ಪಂದ್ಯಾವಳಿಯ ಉದಕ್ಕೂ ನಂದಿನಿ ಬ್ರ್ಯಾಂಡ್ ಪ್ರಚಾರ ಮಾಡಲು ಕೆಎಂಎಫ್ ಮುಂದಾಗಿದೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಕೆಎಂಎಫ್ ಐಎಸ್ಎಲ್ ನ ಮುಖ್ಯ ಪ್ರಾಯೋಜಕತ್ವದ ಮೂಲಕ ಪ್ರಚಾರ ಮಾಡುವ ಗುರಿಯನ್ನು ಹೊಂದಿದೆ. ಎಲ್‌ಇಡಿ ಬೋರ್ಡ್‌ಗಳು, ಪ್ರೆಸೆಂಟೇಶನ್ ಬ್ಯಾಕ್‌ಡ್ರಾಪ್‌ಗಳು ಸೇರಿ ವಿವಿಧ ರೀತಿಯಲ್ಲಿ ಪ್ರಾಯೋಜಕತ್ವದ ಗುರಿಯನ್ನು ಹೊಂದಿದೆ ಎನ್ನಲಾಗಿದೆ.

Also Read  ಕ್ಷಯರೋಗಿಗಳ ಮಾಹಿತಿ ಕಲೆ ಹಾಕಿ -ಅಪರ ಜಿಲ್ಲಾಧಿಕಾರಿ

 

 

 

error: Content is protected !!
Scroll to Top