ಆರ್ಕೆಸ್ಟ್ರಾ ಪ್ರದರ್ಶನದ ವೇಳೆ ಛಾವಣಿ ಕುಸಿತ ಹಲವರಿಗೆ ಗಾಯ          

(ನ್ಯೂಸ್ ಕಡಬ) newskadaba.com  ಬಿಹಾರ, ಸೆ. 4. ಆರ್ಕೆಸ್ಟ್ರಾ ಪ್ರದರ್ಶನದ ವೇಳೆ ತವರದ ಛಾವಣಿ (ಟಿನ್ ರೂಫ್) ಕುಸಿದು ಹಲವರು ಗಾಯಗೊಂಡ ಘಟನೆ ನಡೆದಿದೆ. ಛಪ್ರಾದ ಇಸುಪಾರ್ ನಲ್ಲಿ ನಡೆದ ಮಹಾವೀರ ಮೇಳದ ವೇಳೆ ಈ ಘಟನೆ ನಡೆದಿದೆ.

ಛಾಪ್ರಾ ನಗರದಲ್ಲಿ ನೂರಾರು ಜನರು ತವರದ ಛಾವಣಿಯ ಮೇಲೆ ನಿಂತು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾಗ ಟಿನ್ ರೂಫ್ ತುಂಡಾಗಿ ಅದರ ಕೆಳಗೆ ನಿಂತಿದ್ದ ನೂರಾರು ಜನರ ಮೇಲೆ ಬಿದ್ದಿದೆ. ಇದರಿಂದಾಗಿ ಅನೇಕರು ಗಾಯಗೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಎರಡು ಠಾಣೆಗಳ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಗಾಯಗೊಂಡವರಲ್ಲಿ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

Also Read  ಟ್ರಾಕ್ಟರ್ - ಬೈಕ್ ಢಿಕ್ಕಿ: ಸವಾರ ಮೃತ್ಯು

 

 

error: Content is protected !!
Scroll to Top