ಉಡುಪಿ: 2024-25ನೇ ಸಾಲಿನ ‘ಉತ್ತಮ ಶಿಕ್ಷಕ ಪ್ರಶಸ್ತಿ’ಗೆ 15 ಮಂದಿ ಆಯ್ಕೆ

(ನ್ಯೂಸ್ ಕಡಬ) newskadaba.com  ಉಡುಪಿ, ಸೆ. 4. ಜಿಲ್ಲಾ ಮಟ್ಟದ 2024-25ನೇ ಸಾಲಿನ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ಒಟ್ಟು 15 ಮಂದಿ ಶಿಕ್ಷಕರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು: ಮಾಲಿನಿ ಮುಖ್ಯ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಚ್ಚೂರು ಕಾರ್ಕಳ ವಲಯ, ಖಾತುನ್ ಬಿ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಲ್ಲಾರು ಉರ್ದು ಉಡುಪಿ ವಲಯ, ರವಿರಾಜ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರು, ಸರಕಾರಿ ಹಿ ಪ್ರಾ ಶಾಲೆ ಹೈಕಾಡಿ ಬ್ರಹ್ಮಾವರ ವಲಯ, ಶ್ರೀನಿವಾಸ ಶೆಟ್ಟಿ ಶೆಟ್ಟಿ ಸಹಶಿಕ್ಷಕರು ಸಕಿ ಪ್ರಾ ಶಾಲೆ ಗೋಪಾಡಿ ಪಡು ಕುಂದಾಪುರ ವಲಯ, ಅಮಿತಾ ಬಿ ಸಹಶಿಕ್ಷಕರು ಸಕಿಪ್ರಾಶಾಲೆ ಬಾರಂದಾಡಿ ಬೈಂದೂರು ವಲಯ.


ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು: ಭಾಸ್ಕರ ಪೂಜಾರಿ ಸಹ ಶಿಕ್ಷಕರು ಕೆಪಿಎಸ್ ಕೊಕ್ಕರ್ಣೆ ಬ್ರಹ್ಮಾವರ ವಲಯ, ರಾಮಕೃಷ್ಣ ಭಟ್ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಂತೂರರು ಕೊಪ್ಲ ಉಡುಪಿ ವಲಯ, ಶ್ರೀಮತಿ ಶೆಟ್ಟಿ ಶಶಿಕಲಾ ನಾರಾಯಣ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈರಬೆಟ್ಟು ಕಾರ್ಕಳ ವಲಯ, ಜಯಾನಂದ ಪಟಗಾರ, ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆರಂಜಾಲು ಬೈಂದೂರು ವಲಯ, ಸೀತಾರಾಮ ಶೆಟ್ಟಿ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಂಗಳೂರು ಕುಂದಾಪುರ ವಲಯ.

Also Read  ಉಪ್ಪಿನಂಗಡಿ ಬ್ಲಾಕ್ ವತಿಯಿಂದ SDPI ಮಹಿಳಾ ಚುನಾವಣಾ ಪೂರ್ವಭಾವಿ ಸಭೆ


ಪ್ರೌಢ ಶಾಲಾ ಶಿಕ್ಷಕರು: ಕಮಲ್ ಅಹ್ಮದ್ – ಚಿತ್ರಕಲಾ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಶಿವಪುರ ಕಾರ್ಕಳ ವಲಯ, ಮಂಜುನಾಥ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪುಂದ ಬೈಂದೂರು ವಲಯ, ಜ್ಯೋತಿ ಕೃಷ್ಣ ಪೂಜಾರಿ, ಸಹಶಿಕ್ಷಕರು ಸೋಮ ಬಂಗೇರ ಸರಕಾರಿ ಪ್ರೌಢ ಶಾಲೆ ಕೋಡಿಕನ್ಯಾನ ಬ್ರಹ್ಮಾವರ ವಲಯ, ಮಾಲತಿ ವಕ್ವಾಡಿ ಸಹಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ ಉಡುಪಿ ವಲಯ, ಕರುಣಾಕರ ಶೆಟ್ಟಿ, ಮುಖ್ಯ ಶಿಕ್ಷಕರು ಕೆಪಿಎಸ್ ಬಿದ್ಕಲ್ ಕಟ್ಟೆ ಕುಂದಾಪುರ ವಲಯ.

Also Read  ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ► ಹುತಾತ್ಮರ  ದಿನಾಚರಣೆ

 

error: Content is protected !!
Scroll to Top