(ನ್ಯೂಸ್ ಕಡಬ) newsksdaba.com ಕನಕಪುರ, ಸೆ. 04. ಹಸುಗಳು ಒಂದು ಅಥವಾ ಎರಡು ಕರುಗಳಿಗೆ ಜನ್ಮ ನೀಡುವುದು ಸರ್ವೇ ಸಾಮಾನ್ಯ. ಆದರೆ ಹಾರೋಹಳ್ಳಿ ತಾಲೂಕು ಗೊಟ್ಟಿಗೆಹಳ್ಳಿ ಗ್ರಾಮದಲ್ಲಿ ಸೀಮೆ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ವರದಿಯಾಗಿದೆ.
ದ್ಯಾವಸಂದ್ರ ಗ್ರಾಮ ಪಂಚಾಯತ್ ಗೊಟ್ಟಿಗೆಹಳ್ಳಿ ಗ್ರಾಮದ ಮಂಜುನಾಥ್ ಎಂಬವರು ಸಾಕಿರುವ ಸೀಮೆ ಹಸು ಇದುವರೆಗೂ ಒಂದೊಂದು ಕರುವಿಗೆ ಜನ ನೀಡುತ್ತಿತ್ತು.ಇದೀಗ ಮೂರು ಕರುಗಳಿಗೆ ಒಮ್ಮೆಲೆ ಜನ್ಮನೀಡಿ ಅಚ್ಚರಿ ಮೂಡಿಸಿದೆ.