ಕೋವಿಡ್-19 ಸಮಯದಲ್ಲಿ ಶೇ. 80 ರಷ್ಟು ಪತ್ರಕರ್ತರ ಸ್ವಯಂ ನಿವೃತ್ತಿ ವಜಾ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸಮಿತಿ ವರದಿ

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಸೆ. 04.  ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚಿನ ಪತ್ರಕರ್ತರಿಗೆ ರಾಜೀನಾಮೆ ನೀಡಲು ಮತ್ತು ಸ್ವಯಂ ನಿವೃತ್ತಿಗೆ ಒತ್ತಾಯಿಸಲಾಗಿದೆ, ಇದಲ್ಲದೆ ಕೆಲ ಸಂಸ್ಥೆಗಳು ಪತ್ರಕರ್ತರನ್ನು ಸ್ಪಷ್ಟಕಾರಣ ನೀಡದೆ ಬಲವಂತವಾಗಿ ವಜಾಗೊಳಿಸಿದೆ ಎಂಬ ಅಂಶವನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.


COVID-19 ಸಾಂಕ್ರಾಮಿಕ ಸಮಯದಲ್ಲಿ ವಿವಿಧ ಮಾಧ್ಯಮ ಸಮೂಹದಿಂದ ಪತ್ರಕರ್ತರನ್ನು ಪದಚ್ಯುತಿಗೊಳಿಸಿರುವ ಕುರಿತು ಅಧ್ಯಯನ ಮಾಡಲು ಸಮಿತಿಯನ್ನು ಭಾರತೀಯ ಪ್ರೆಸ್ ಕೌನ್ಸಿಲ್ ಈ ಮೊದಲು ರಚಿಸಿತ್ತು. ಸಮಿತಿಯ ಮುಂದೆ ಹಾಜರಾದ ಶೇಕಡಾ 80ರಷ್ಟು ಪತ್ರಕರ್ತರು ತಮ್ಮನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ, ಸ್ವಯಂ ನಿವೃತ್ತಿ ಪಡೆದುಕೊಳ್ಳುವಂತೆ ಕೇಳಲಾಯಿತು ಕೊನೆಗೆ ತಮ್ಮ ಸ್ಥಾನದಿಂದ ವಜಾಗೊಳಿಸಲಾಯಿತು ಎಂದು ಹೇಳಿದ್ದಾರೆ.

Also Read  ಶಿಗ್ಗಾಂವಿ ಭರ್ಜರಿ ಗೆಲುವು ಸಾಧಿಸಿದ ಸಿಎಂ ಬಸವರಾಜ ಬೊಮ್ಮಾಯಿ

 

error: Content is protected !!
Scroll to Top