ಸರ ಕಳ್ಳತನ- ಪ್ರಕರಣ ದಾಖಲು..!

(ನ್ಯೂಸ್ ಕಡಬ) newskadaba.com  ಉಡುಪಿ, ಸೆ. 04.  ನಗರದ ಶಿವಳ್ಳಿ ಗ್ರಾಮದಲ್ಲಿ ಹಾಡುಹಗಲೇ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ದೂರುದಾರರಾದ ಕಮಲಾ (70) ಉಡುಪಿಯ ಶಿವಳ್ಳಿ ಗ್ರಾಮದವರು. ಅವರು ಶಿವಳ್ಳಿ ಗ್ರಾಮದ ಸಗ್ರಿನೋಲ್ ರಸ್ತೆಯಲ್ಲಿರುವ ತಿರುಮಲ ಪೌಲ್ಟ್ರಿ ಫಾರಂ ಬಳಿಯ ತನ್ನ ಸಹೋದರನ ಮನೆಗೆ ತೆರಳುತ್ತಿದ್ದಾಗ ಕಳ್ಳತನ ನಡೆದಿದೆ. ದೂರಿನ ಪ್ರಕಾರ, ಪೆರಂಪಳ್ಳಿ ಕಡೆಯಿಂದ ಬಂದ ಅಪರಿಚಿತ ವ್ಯಕ್ತಿ ಕಮಲಾ ಅವರ ಹಿಂದಿನಿಂದ ಬಂದು ಆಕೆಯ ಕತ್ತಿನಲ್ಲಿದ್ದ 16 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡಿದ್ದಾನೆ.  ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  ದ. ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ➤ ಜಿಲ್ಲಾ ಮಟ್ಟದ ಹಾಗೂ ವಲಯ ಮಟ್ಟದ ಶಿಕ್ಷಕರ ದಿನಾಚರಣೆ

 

error: Content is protected !!
Scroll to Top