ಲಾರ್ಡ್ಸ್ ನಲ್ಲಿ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್

(ನ್ಯೂಸ್ ಕಡಬ) newskadaba.com  ದುಬೈ, ಸೆ. 04.  ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್(ಡಬ್ಲ್ಯುಟಿಸಿ) ಫೈನಲ್ ಪಂದ್ಯವು ಮುಂದಿನ ವರ್ಷದ ಜೂನ್ 11ರಿಂದ 15ರ ತನಕ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿಳಿಸಿದೆ.

ಅಗತ್ಯವಿದ್ದರೆ ಜೂನ್ 16ರಂದು ಮೀಸಲು ದಿನವಾಗಿರಲಿದೆ ಎಂದು ಐಸಿಸಿ ತಿಳಿಸಿದ್ದು, ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕ್ರಿಕೆಟ್ ಕ್ಯಾಲೆಂಡರ್‌ ನಲ್ಲಿ ಒಂದು ಪ್ರಮುಖ ಸ್ಪರ್ಧೆಯಾಗಿದೆ. 2025ರ ಆವೃತ್ತಿಯ ದಿನಾಂಕವನ್ನು ಪ್ರಕಟಿಸಲು ನಮಗೆ ಸಂತೋಷವಾಗುತ್ತಿದೆ ಎಂದು ಐಸಿಸಿ ಸಿಇಒ ಜೆಫ್ ಅಲ್ಲಾರ್ಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಈ ವರ್ಷ ನನ್ನ ಕೊನೆಯ ದಸರಾ ಆಚರಣೆ ► ಜನಾರ್ಧನ ಪೂಜಾರಿ

 

error: Content is protected !!
Scroll to Top