ಕಟೀಲಿನಲ್ಲಿ ಶಿಕ್ಷಕ ಸಾಹಿತಿಗಳ ರಾಜ್ಯ ಸಮ್ಮೇಳನ – ಕರ್ನಾಟಕ ಚುಟಕು ಚಿಣ್ಮಯಿ ರಾಜ್ಯ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newsksdaba.com ಮಂಗಳೂರು, ಸೆ. 04. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ, ದ.ಕ. ಜಿಲ್ಲಾ ಸಮಿತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು   ಇವರ ವತಿಯಿಂದ ಸೆ. 05ರಂದು ಕಟೀಲು ಕ್ಷೇತ್ರದಲ್ಲಿ ಶಿಕ್ಷಕ ದಿನಾಚರಣೆ ಮತ್ತು ರಾಜ್ಯಮಟ್ಟದ ಶಿಕ್ಷಕ ಸಾಹಿತಿಗಳ 7ನೇ ಸಮ್ಮೇಳನ ಶ್ರೀಕಾಂತ್ ಕೆ.ವಿ. ಹಿರಿಯ ಶಿಕ್ಷಕ ಸಾಹಿತಿ ಹೊಸಕೋಟೆ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕ.ಚು.ಸಾ.ಪ. ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ  ತಿಳಿಸಿದ್ದಾರೆ.

 

ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣರು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.

Also Read  ಕಡಬ: ಅನಾರೋಗ್ಯದಿಂದ ಬಳಲುತ್ತಿದ್ದ ಪಿಯುಸಿ ವಿದ್ಯಾರ್ಥಿ ಮೃತ್ಯು...!!

ರಾಜ್ಯ ಗೌರವ ಪುರಸ್ಕಾರ- ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹರಿನಾರಾಯಣ ಆಸ್ರಣರಿಗೆ ‘ದುರ್ಗಾಪ್ರಸಾದ’, ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಚುಟುಕು ದಾಸೋಹಿ ಗೌರವ ಪುರಸ್ಕಾರ ನೀಡಲಾಗುವುದು.

ಚುಟುಕು ಚಿಣ್ಮಯಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿಗಳು

ಶಿಕ್ಷಕ ಸಾಹಿತಿಗಳಾದ ವಿ.ಬಿ. ಕುಲಮರ್ವ ಕಾಸರಗೋಡು, ಡಾ. ಸುರೇಶ ನೆಗಳಗುಳಿ ಮಂಗಳೂರು, ಮುನಿರಾಜ ರೆಂಜಾಳ ಮೂಡಬಿದ್ರೆ, ಜಯಾನಂದ ಪೆರಾಜೆ ದಕ್ಷಿಣ ಕನ್ನಡ , ಶಾಂತ ಪುತ್ತೂರು , ಸುಮಲತಾ ಬಿ.ಎಸ್. ಬಾಣಸವಾಡಿ , ಡಾ. ಪ್ರಭುಸ್ವಾಮಿ ಹಾಲಿವಾಡಿ ಮಠ ಹಂಸಭಾವಿ, ವಿದ್ವಾನ್ ರಘುಪತಿ ಭಟ್ ಉಡುಪಿ, ರವಿರಾಜ ತಿರುಮಲೆ ಹಾನಗಲ್, ರವೀಂದ್ರ ಶೆಟ್ಟಿ ಬಳಂಜ ಇವರಿಗೆ ಚುಟುಕು ಚಿಣ್ಮಯಿ ರಾಜ್ಯ ಶಿಕ್ಷಕ ಸಾಹಿತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

error: Content is protected !!
Scroll to Top