ಕನಿಷ್ಟ ವೇತನ ಕಾಯಿದೆ ವ್ಯಾಪ್ತಿಗೆ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಉದ್ಯೋಗ

(ನ್ಯೂಸ್ ಕಡಬ) newsksdaba.com ಮಂಗಳೂರು, ಸೆ. 04. ವಿದ್ಯುತ್ ಉತ್ಪಾದನಾ ಘಟಕದಲ್ಲಿ ಉದ್ಯೋಗ ಉದ್ದಿಮೆಯನ್ನು 1948ರ ಕನಿಷ್ಠ ವೇತನ ಕಾಯ್ದೆ ಅನುಸೂಚಿಗೆ ಸೇರ್ಪಡೆಗೊಳಿಸಿ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲು ಮೂರು ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತು ಆದರೆ ಈ ಅವಧಿಯಲ್ಲಿ ಯಾವುದೇ ಸಲಹೆ/ಆಕ್ಷೇಪಣೆಗಳು ಸ್ವೀಕೃತಗೊಂಡಿರುವುದಿಲ್ಲ.


ಆದ್ದರಿಂದ, ಕನಿಷ್ಠ ವೇತನ ಕಾಯ್ದೆ 1948 (1948ರ ಕೇಂದ್ರಾಧಿನಿಯಮ 11)ರ ಸೆಕ್ಷನ್ 27ರಲ್ಲಿ “ವಿದ್ಯುತ್ ಉತ್ಪಾದನಾ ಘಟಕದಲ್ಲಿ ಉದ್ಯೋಗ (Employment in Power Generation Units)&quot)” ಉದ್ದಿಮೆಯನ್ನು ಅನುಬಂಧ ಭಾಗ-1ಕ್ಕೆ ಸೇರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಕಾರ್ಮಿಕ ಇಲಾಖೆಯ ತಾಲೂಕು ನಿರೀಕ್ಷಕರ ಕಛೇರಿ 1,2,3 ಮತ್ತು 4 ವೃತ್ತ ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಮತ್ತು ಕಡಬ ವೃತ್ತ ಕಚೇರಿಗಳನ್ನು ಸಂಪರ್ಕಿಸುವಂತೆ ದ.ಕ ಉಪ ವಿಭಾಗ -1 ಮತ್ತು 2ರ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top