ಯೂಟ್ಯೂಬ್ ಸಹಾಯದಿಂದ UPSC ತೇರ್ಗಡೆಯಾದ ಡಾ.ಆಕಾಂಕ್ಷಾ ಆನಂದ್

(ನ್ಯೂಸ್ ಕಡಬ) newskadaba.com  ಪಾಟ್ನಾ, ಸೆ. 04.  ಯುಪಿಎಸ್ ಸಿಗೆ ತಯಾರಿ ನಡೆಸಲು ಕೋಚಿಂಗ್ ತರಗತಿಗಳಿಗೆ ಸೇರುತ್ತಾರೆ. ಆದರೆ ಕೋಚಿಂಗ್ ಇಲ್ಲದೆ ಮನೆಯಲ್ಲಿಯೇ ಓದಿ ಐಎಎಸ್ ಆಗುವವರೂ ಇದ್ದಾರೆ. ಈ ಸಾಲಿಗೆ ಸೇರಿದವರು 2023ರ ಬ್ಯಾಚ್ ನ ಐಎಎಸ್ ಅಧಿಕಾರಿ ಡಾ.ಆಕಾಂಕ್ಷಾ ಆನಂದ್ . ಯಾವುದೇ ತರಬೇತಿ ಪಡೆಯದೇ UPSC ತೇರ್ಗಡೆಯಾಗಿದ್ದು, ಮನೆಯಲ್ಲಿಯೇ ಸ್ವಯಂ ಅಧ್ಯಯನ ಹಾಗೂ ಯೂಟ್ಯೂಬ್ ಸಹಾಯದಿಂದ ಕಠಿಣ ಪರೀಕ್ಷೆಯನ್ನು ಭೇದಿಸಿದ್ದಾರೆ. ಇವರ ಯಶಸ್ಸಿನ ಗುಟ್ಟು ಇಲ್ಲಿದೆ.

ಐಎಎಸ್ ಆಕಾಂಕ್ಷಾ ಆನಂದ್ ಬಿಹಾರದ ಪಾಟ್ನಾ ನಿವಾಸಿ. ಅವರ ತಾಯಿ ಶಿಕ್ಷಕಿ ಮತ್ತು ತಂದೆ ಆರೋಗ್ಯ ಇಲಾಖೆಯಲ್ಲಿ ಗುಮಾಸ್ತರಾಗಿದ್ದಾರೆ. ಅವರ ತಾಯಿಗೆ ತನ್ನ ಮಗಳು ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸಿತ್ತು. ಆದಾಗ್ಯೂ, ಮೊದಲು ಪಾಟ್ನಾ ಪಶುವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದರು. ಅಲ್ಲಿ ಆಕೆ ಚಿನ್ನದ ಪದಕ ವಿಜೇತೆ. ವೆಟರ್ನರಿಯಲ್ಲಿ ಪದವಿ ಮುಗಿಸಿದ ನಂತರ ಆಕಾಂಕ್ಷಾ ಯುಪಿಎಸ್ ಸಿಗೆ ತಯಾರಿ ಆರಂಭಿಸಿದರು. ಕಾಲೇಜು ದಿನಗಳಿಂದಲೂ ಐಎಎಸ್ ಅಧಿಕಾರಿಯಾಗುವ ಆಸಕ್ತಿ ಹೊಂದಿದ್ದರು. UPSC ಸಂದರ್ಶನದ ಸಮಯದಲ್ಲಿ ಪಶುವೈದ್ಯಕೀಯ ಅಧಿಕಾರಿಯಾಗಿ ಸೇರಿದ್ದರು. 2022 ರಲ್ಲಿ ಎರಡನೇ ಬಾರಿಗೆ UPSC ಪರೀಕ್ಷೆಯನ್ನು ನೀಡಿದ್ದರು. ಅಂತಿಮವಾಗಿ ಅವರು ಸುರಕ್ಷಿತ ಅವಕಾಶವನ್ನು ಬಿಟ್ಟು UPSC ಅನ್ನು ಆಯ್ಕೆ ಮಾಡಿದರು ಎನ್ನಲಾಗಿದೆ.

Also Read  ಬಸ್ಗಳಲ್ಲಿ ಸಾಮಾಜಿಕ ಅಂತರ ಪಾಲಿಸದಿದ್ದಲ್ಲಿ ಪ್ರಕರಣ ದಾಖಲು ➤ ಸಭೆಯಲ್ಲಿ ಉಡುಪಿ DC ಎಚ್ಚರಿಕೆ

 

 

error: Content is protected !!
Scroll to Top