ಬ್ರೂನೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

(ನ್ಯೂಸ್ ಕಡಬ) newskadaba.com  ಬಂದರ್ ಸೆರಿ ಬೇಗವಾನ್, ಸೆ. 04.  ಎರಡು ದಿನದ ಭೇಟಿಗಾಗಿ ಬ್ರೂನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆತ್ಮೀಯ ಸ್ವಾಗತ ದೊರೆಯಿತು. ಬ್ರೂನೈಯ ಸುಲ್ತಾನಹಾಜಿ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಮೇರೆಗೆ ಮೋದಿ ಬ್ರೂನೈಗೆ ಆಗಮಿಸಿದ್ದಾರೆ. ನಮ್ಮ ರಾಜತಾಂತ್ರಿಕ ಸಂಬಂಧದ 40 ವರ್ಷಗಳ ಸಂಭ್ರಮಾಚರಣೆಯಲ್ಲಿ ನಮ್ಮ ಐತಿಹಾಸಿಕ ಸಂಬಂಧವನ್ನು ಹೊಸ ಎತ್ತರಕ್ಕೆ ಏರಿಸಲು ಇದೊಂದು ಸುಸಂದರ್ಭವಾಗಿದೆ ಎಂದು ಮೋದಿ ಹೇಳಿದ್ದಾರೆ.

ಬ್ರೂನೈಗೆ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಪ್ರವಾಸ ಇದಾಗಿದ್ದು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ರಾಜಧಾನಿಯಲ್ಲಿರುವ ಒಮರ್ ಅಲಿ ಸಫೀಯುದ್ದೀನ್ ಮಸೀದಿಗೆ ಭೇಟಿ ನೀಡಿದ ಬಳಿಕ ಬ್ರೂನೈಯಲ್ಲಿ ಭಾರತದ ಹೈಕಮಿಷನ್‍ ನ ನೂತನ ಮುಖ್ಯ ಕಚೇರಿಯನ್ನು ಉದ್ಘಾಟಿಸಿದರು. ಭಾರತೀಯ ಸಮುದಾಯದವರು ಈ ಸಂದರ್ಭ ಉಪಸ್ಥಿತರಿದ್ದರು ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  ಲಕ್ಷದ್ವೀಪದಲ್ಲಿ ಬಾಕಿಯಾಗಿದ್ದ 19 ಜನ ಕಾರ್ಮಿಕರ ರಕ್ಷಣೆ

 

error: Content is protected !!
Scroll to Top