ಸೆ. 22ರಂದು ಎಸ್.ಐ ಪರೀಕ್ಷೆ; ಕುರ್ತಾ, ಪೈಜಾಮ, ಜೀನ್ಸ್ ನಿಷೇಧ

(ನ್ಯೂಸ್ ಕಡಬ) newsksdaba.com ಬೆಂಗಳೂರು, ಸೆ‌. 03. ಖಾಲಿ ಇರುವ 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸೆ. 22ರಂದು ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಫ್ಯಾನ್ಸಿ ಬಟ್ಟೆ ಧರಿಸಿ ಬರುವುದನ್ನು ನಿರ್ಬಂಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆದೇಶಿಸಿದೆ. ಪ್ರಸ್ತುತ ಪರೀಕ್ಷೆಗೆ 66 ಸಾವಿರ ಅಭ್ಯರ್ಥಿಗಳು ಹಾಜರಾಗಲಿದ್ದು, ಸುಗಮವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಗೆ ಒಂದು ವಾರ ಮೊದಲೇ ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕೆಲವು ಸೂಚನೆಗಳನ್ನು ವಿಧಿಸಲಾಗಿದ್ದು, ಅವುಗಳಲ್ಲಿ ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್‌ ಮತ್ತು ಶೂ ಧರಿಸುವುದನ್ನು ನಿಷೇಧಿಸಲಾಗಿದೆ.


ಪುರುಷ ಅಭ್ಯರ್ಥಿಗಳು ಕಾಲರ್‌ ರಹಿತ ಶರ್ಟ್ ಧರಿಸಬೇಕು. ಜೇಬುಗಳಿಲ್ಲದ ಅಥವಾ ಕಡಿಮೆ ಜೇಬು ಇರುವ ಬಟ್ಟೆಗಳನ್ನು ಧರಿಸಬೇಕು. ಪಾಕೆಟ್ ಗಳು, ಜಿಪ್‌ ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳನ್ನು ಧರಿಸಬಾರದು. ಅಭ್ಯರ್ಥಿಗಳು ಸ್ಯಾಂಡಲ್‌ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ ಎಂದು ಸೂಚಿಸಲಾಗಿದೆ.

ಮಹಿಳೆಯರಿಗೆ ಕಾಲುಂಗುರ ಮತ್ತು ಮಂಗಳಸೂತ್ರ ಧರಿಸಲು ಅವಕಾಶವಿದ್ದು, ಉಳಿದಂತೆ ಯಾವುದೇ ರೀತಿಯ ಲೋಹದ ಅಭರಣವನ್ನು ಧರಿಸುವುದಕ್ಕೆ ಎಲ್ಲಾ ಅಭ್ಯರ್ಥಿಗಳಿಗೆ ನಿರ್ಬಂಧವಿದೆ. ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಎತ್ತರವಾದ ಹಿಮ್ಮಡಿಯ ಶೂ ಗಳನ್ನು/ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ, ಚಪ್ಪಲಿಗಳನ್ನಾಗಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳನ್ನು ಧರಿಸಬೇಕು ಎಂದು ಸೂಚಿಸಲಾಗಿದೆ.

error: Content is protected !!

Join WhatsApp Group

WhatsApp Share