ಜಮ್ಮುವಿನ ಸೇನಾ ಶಿಬಿರದಲ್ಲಿ ಯೋಧನ ನಿಗೂಢ ಸಾವು..! ಉಗ್ರರ ದಾಳಿಯಿಂದ ಹುತಾತ್ಮರಾಗಿರುವ ಭಾರತೀಯ ಸೇನೆ ಶಂಕೆ   

(ನ್ಯೂಸ್ ಕಡಬ) newskadaba.com ಶ್ರೀನಗರ, ಸೆ. 03.  ಜಮ್ಮುವಿನ ಸುಂಜ್ವಾನ್ ಸೇನಾ ಶಿಬಿರದಲ್ಲಿ ಯೋಧರೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಉಗ್ರರ ದಾಳಿಯಿಂದ ಯೋಧ ಹುತಾತ್ಮರಾಗಿರುವ ಸಂಶಯ ವ್ಯಕ್ತವಾಗಿದೆ.

ಸುಂಜ್ವಾನ್ ಮಿಲಿಟರಿ ಶಿಬಿರದಲ್ಲಿ ಯೋಧರನ್ನು ಸೆಂಟ್ರಿ ಡ್ಯೂಟಿಗಾಗಿ ನಿಯೋಜನೆ ಮಾಡಲಾಗಿತ್ತು. ಉಗ್ರರ ದಾಳಿಯಿಂದಾಗಿ ಯೋಧ ಸಾವನ್ನಪ್ಪಿರಬಹುದು ಎಂದು ಭಾರತೀಯ ಸೇನೆ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಭಾರತೀಯ ಸೇನೆ ಹಾಗೂ ಪೊಲೀಸ್ ತಂಡ ಶೋಧ ಕಾರ್ಯಚರಣೆ ಪ್ರಾರಂಭಿಸಿದೆ. ಇದರೊಂದಿಗೆ ಡ್ರೋನ್ ಮತ್ತು ಹೆಲಿಕಾಪ್ಟರ್ ಮೂಲಕ ವೈಮಾನಿಕ ಕಣ್ಗಾವಲನ್ನು ನಿಯೋಜನೆ ಮಾಡಲಾಗಿದೆ. ಉಗ್ರರು ಯೋಧನ ಮೇಲೆ ಗುರಿಯಿಡಲು ಸ್ನೈಪರ್ ಬಂದೂಕನ್ನು ಬಳಸಿದ್ದಾರೆ. ಡ್ರೋನ್ ಮತ್ತು ಹೆಲಿಕಾಪ್ಟರ್ ಮೂಲಕ ಯಾವುದೇ ಶಂಕಿತ ಉಗ್ರಗಾಮಿಗಳ ಚಲನವಲನಗಳು ಕಂಡುಬಂದಿಲ್ಲ ಎಂದು ರಕ್ಷಣಾ ಮೂಲಗಳು ತಿಳಿಸಿದೆ ಎನ್ನಲಾಗಿದೆ.

Also Read  ಹಿಜಾಬ್ ಧರಿಸಿದ್ದಕ್ಕೆ ವೈದ್ಯೆಗೆ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ➤ ಬಿಜೆಪಿ ಕಾರ್ಯಕರ್ತನ ವಿರುದ್ಧ ಕೇಸ್ ದಾಖಲು

 

error: Content is protected !!
Scroll to Top