ಅನಾರೋಗ್ಯ ಪೀಡಿತ ಮಹಿಳೆಗೆ ಸರ್ವೆ ಯುವಕ ಮಂಡಲದಿಂದ ಧನಸಹಾಯ

(ನ್ಯೂಸ್ ಕಡಬ) newskadaba.com ಸವಣೂರು, ಫೆ.27. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಭಕ್ತಕೋಡಿ ಪಾಲೆತ್ತಗುರಿ ನಿವಾಸಿ ಪದ್ಮನಾಭ ಅವರ ಪತ್ನಿ ಸೀತಾ ಅವರಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕಾಗಿ ಸರ್ವೆ ಷಣ್ಮುಖ ಯುವಕ ಮಂಡಲದ ವತಿಯಿಂದ 5000 ರೂ.ಗಳ ಆರ್ಥಿಕ ನೆರವು ನೀಡಲಾಯಿತು.

ಷಣ್ಮುಖ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ, ತಾಲೂಕು ಯುವಜನ ಒಕ್ಕೂಟದ ಕಾರ್ಯದರ್ಶಿ ಸುಬ್ರಹ್ಮಣ್ಯ ಕರುಂಬಾರು ಹಾಗೂ ರಾಜೇಶ್ ಎಸ್.ಡಿ. ಧನ ಸಹಾಯ ಹಸ್ತಾಂತರಿಸಿದರು. ಸರ್ವೆ ಎಸ್.ಜಿ.ಎಂ. ಪ್ರೌಢಶಾಲೆಯ ಮುಖ್ಯಗುರು ಶ್ರೀನಿವಾಸ್ ಎಚ್.ಬಿ. ಯುವಕ ಮಂಡಲದ ಪದಾಧಿಕಾರಿಗಳಾದ ಡಾ.ಪ್ರವೀಣ್ ಸರ್ವೆ ದೋಳಗುತ್ತು, ಶರೀಫ್ ಎಸ್.ಎಂ., ನಾಗೇಶ್ ಪಟ್ಟೆಮಜಲು, ರಾಮಣ್ಣ ಪೂಜಾರಿ, ವಿಜಯ ಬ್ಯಾಂಕ್, ಕಿಶೋರ್ ಸರ್ವೆ ದೋಳಗುತ್ತು, ರವಿ ಸರ್ವೆ ದೋಳಗುತ್ತು, ಗೌತಮ್ ಪಟ್ಟೆಮಜಲು, ಶಿವಪ್ರಸಾದ್ ಅಲೇಕಿ ಸಹಕಾರ ನೀಡಿದರು. ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಎಸ್., ಗೌರವ ಸಲಹೆಗಾರರಾದ ಶಶಿಧರ್ ಎಸ್.ಡಿ, ಕ್ರೀಡಾ ಕಾರ್ಯದರ್ಶಿ ಅಶೋಕ್ ಎಸ್.ಡಿ., ಸದಸ್ಯರಾದ ಜಯಂತ್ ಸರ್ವೆ ದೋಳಗುತ್ತು, ಕರಿಯಪ್ಪ ಕೆ.ಎಸ್., ಕೃಷ್ಣಪ್ಪ ಪಾಲೆತ್ತಗುರಿ, ಹರೀಶ್ ಮರಿಯ ಉಪಸ್ಥಿತರಿದ್ದರು.

Also Read  ತೂಫಾನ್ - ಟ್ರಕ್ ನಡುವೆ ಮುಖಾಮುಖಿ ಢಿಕ್ಕಿ ► ಒಂದೇ ಕುಟುಂಬದ 10 ಮಂದಿ ವಿಧಿವಶ

error: Content is protected !!
Scroll to Top