ಡೀಸೆಲ್ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮನವಿ..!

(ನ್ಯೂಸ್ ಕಡಬ) newskadaba.com ನವವದೆಹಲಿ, ಸೆ. 03. ಭಾರತದಲ್ಲಿ ಡೀಸೆಲ್ ವಾಹನಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ಕಾರು ತಯಾರಿಕಾ ಕಂಪನಿಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮನವಿ ಮಾಡಿದ್ದಾರೆ.


ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಿಐಐ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಶೀಘ್ರದಲ್ಲೇ ಡೀಸೆಲ್‌ಗೆ ವಿದಾಯ ಹೇಳುವಂತೆ ಜನರಿಗೆ ಸಲಹೆ ನೀಡಿದರು. ಡೀಸೆಲ್ ವಾಹನಗಳ ತಯಾರಿಕೆಯನ್ನು ನಿಲ್ಲಿಸದಿದ್ದರೆ ವಾಹನಗಳ ಮೇಲೆ ಇಷ್ಟು ತೆರಿಗೆ ವಿಧಿಸಿ ಮಾರಾಟ ಮಾಡುವುದು ಕಷ್ಟವಾಗುತ್ತದೆ. ಮಾಲಿನ್ಯ ಮುಕ್ತವಾಗಲು ನಾವು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಬಿಟ್ಟು ಹೊಸ ಹಾದಿಯಲ್ಲಿ ನಡೆಯಬೇಕಾಗಿದೆ. ಇಂಧನ ಮಾಲಿನ್ಯ ಮತ್ತು ಅದರ ಆಮದುಗಳನ್ನು ಕಡಿಮೆ ಮಾಡಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಡೀಸೆಲ್ ವಾಹನಗಳ ಮೇಲೆ 10 ಪ್ರತಿಶತ ಹೆಚ್ಚುವರಿ ಜಿಎಸ್‌ಟಿಯನ್ನು ನಾನು ಹಣಕಾಸು ಸಚಿವರಿಂದ ಒತ್ತಾಯಿಸುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ. ಮುಂದಿನ 10 ವರ್ಷಗಳ ಒಳಗೆ ಪೆಟ್ರೋಲ್ ಮತ್ತು ಡೀಸೆಲ್‌ ಮೂಲಕ ಚಲಿಸುವ ವಾಹನಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ನಾನು ಬಯಸುತ್ತೇನೆ ಎಂದು ನಿತಿನ್ ಗಡ್ಕರಿ ಹೇಳಿದರು. ಇಂದಿನ ಕಾಲದಲ್ಲಿ ಇಲೆಕ್ಟ್ರಿಕ್ ಸ್ಕೂಟರ್‌ಗಳು, ಕಾರುಗಳು ಮತ್ತು ಬಸ್‌ ಗಳು ಉತ್ತಮ ಆಯ್ಕೆಯಾಗಿ ಹೊರಹೊಮ್ಮಿವೆ. ಡೀಸೆಲ್‌ ಗೆ 100 ರೂಪಾಯಿ ಖರ್ಚು ಮಾಡಿದರೆ ವಿದ್ಯುತ್‌ಗೆ ಕೇವಲ 4 ರೂ. ಖರ್ಚು ಮಾಡಬೇಕಾಗುತ್ತದೆ ಎಂದೂ ಅವರ ತಿಳಿಸಿದ್ದಾರೆ.

error: Content is protected !!
Scroll to Top