ಲ್ಯಾಪ್ ಟಾಪ್ ಕಳ್ಳತನ- ಇಬ್ಬರ ಬಂಧನ

Theft, crime, Robbery

(ನ್ಯೂಸ್ ಕಡಬ) newskadaba.com ಮಣಿಪಾಲ, ಸೆ. 03. ನಗರದಲ್ಲಿರುವ ಖಾಸಗಿ ಅಪಾರ್ಟ್ಮೆಂಟ್ ಒಂದರಲ್ಲಿ ಲ್ಯಾಪ್ಟಾಪ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.

ಬಂಧಿತರನ್ನು ಪಿ ಕಾರ್ತಿಕ್ ಮತ್ತು ಬಾಲನ್ ಗೋವಿಂದನ್ ಎಂದು ಗುರುತಿಸಲಾಗಿದೆ. ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಆಕಾಶ್ ಸಿ. ಸೂರ್ಯವಂಶಿ ಎಂಬವರ ನಿವಾಸದಿಂದ ಅಂದಾಜು 4,00,000 ರೂಪಾಯಿ ಮೌಲ್ಯದ ಎರಡು ಲ್ಯಾಪ್ಟಾಪ್ಗಳು ಮತ್ತು ಆಪಲ್ ಐಪಾಡ್ ಮೊಬೈಲ್ಕಳ್ಳತನವಾಧ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಿದರ ತನಿಖೆಯನ್ನು ಕೈಗೊಂಡ ಮಣಿಪಾಲ ಪೊಲೀಸರ ತಂಡವು ಆರೋಪಿಗಳಾದ ಪಿ ಕಾರ್ತಿಕ್ ಮತ್ತು ಬಾಲನ್ ಗೋವಿಂದನ್ ಅವರನ್ನು ಉಡುಪಿ ಜಿಲ್ಲೆಯ ಕಟಪಾಡಿ ಬಸ್ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 4,00,000 ರೂ. ಮೌಲ್ಯದ ಎರಡು ಲ್ಯಾಪ್ಟಾಪ್ಗಳು ಮತ್ತು ಆಪಲ್ ಐಪಾಡ್ ವಶಪಡಿಸಿಕೊಳ್ಳಲಾಗಿದ್ದು, ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

error: Content is protected !!

Join the Group

Join WhatsApp Group