ಪುತ್ತೂರು: ಕಿರಿಯ ವಿಭಾಗದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಶಶಾಂಕ್ ರೈ ಪಟ್ಟೆ ಪ್ರಥಮ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 03.  ಇಂಡೋ-ನೇಪಾಳ ಅಂತರಾಷ್ಟ್ರೀಯ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಕ್ರೀಡಾ ಚಾಂಪಿಯನ್‌ಶಿಪ್-2024 ನ ಕಿರಿಯ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಭಾರತ ತಂಡ ಪ್ರಥಮ ಸ್ಥಾನ ಗಳಿಸಿದೆ. ಈ ಪಂದ್ಯಾಕೂಟದಲ್ಲಿ ಭಾರತ ತಂಡವನ್ನು ಪುತ್ತೂರಿನ ಶಶಾಂಕ್ ರೈ ಪಟ್ಟೆ(19) ಅವರು ಪ್ರತಿನಿಧಿಸಿರುತ್ತಾರೆ.

ಸೆಪ್ಟೆಂಬರ್ 2 ರಂದು ನೇಪಾಳದಲ್ಲಿ ನಡೆದ ಕಿರಿಯ ವಿಭಾಗದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಸದಾನಂದ ರೈ ಹಾಗೂ ಸವಿತಾ ರೈ ದಂಪತಿಗಳ ಪುತ್ರ ಶಶಾಂಕ್ ರೈ ಪಟ್ಟೆ ಪ್ರತಿನಿಧಿಸಿರುಸ್ತಾರೆ. ಇವರು ವಾಲಿಬಾಲ್ ತರಬೇತುದಾರರಾದ ಚರಣ್ ಸಾಯಿಯವರಿಂದ ತರಬೇತಿ ಪಡೆದಿರುತ್ತಾರೆ. ಪ್ರಸ್ತುತ ಅವರು ಮಂಗಳೂರಿನ ಎಸ್‌ಎನ್‌ಎಸ್ ಕಾಲೇಜು ಬಜ್ಪೆಯಲ್ಲಿ ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Also Read  ಉಳ್ಳಾಲ: ನಗರ ಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ 

 

error: Content is protected !!
Scroll to Top