ವೇಲಂಕಣಿ- ಮಡಗಾಂವ್ ನಡುವೆ ವಿಶೇಷ ರೈಲು ಸೇವೆ…!

(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ. 03. ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಕರಾವಳಿ ಕ್ರೈಸ್ತ ಸಮುದಾಯ ನೀಡಿದ ಮನವಿಯನ್ನು ಪರಿಗಣಿಸಿ ಕೊಂಕಣ ರೈಲ್ವೇ ನಿಗಮಕ್ಕೆ ಕೋಟ ನೀಡಿದ ಸೂಚನೆಯಂತೆ ಇದೀಗ ವೇಲಂಕಣಿ ಮಡಗಾಂವ್ ಮದ್ಯೆ ವಿಶೇಷ ರೈಲು ಸೇವೆ ಘೋಷಣೆಯಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ವೇಲಂಕಣಿ ಫೆಸ್ಟಿವಲ್ ನಡೆಯಲಿದ್ದು, ಹಾಗಾಗಿ ಕುಂದಾಪುರ ಕ್ರೈಸ್ತ ಸಮುದಾಯವು ವೇಲಾಂಕಣಿ ವಿಶೇಷ ರೈಲಿನ ಆರಂಭಕ್ಜೆ ಸಂಸದರ ಮೂಲಕ ರೈಲ್ವೇ ಸಮಿತಿಗೆ ಮನವಿ ಸಲ್ಲಿಸಿತ್ತು. ಈ‌ ಬೇಡಿಕೆಯಂತೆ ಕಳೆದ ವಾರ ಕೊಂಕಣ ರೈಲ್ವೆ ನಿಗಮದ ಆಡಳಿತ ನಿರ್ದೇಶಕರ ಜತೆ ನಡೆದ ಸಭೆಯಲ್ಲಿ ಸಂಸದರು ವೇಲಾಂಕಣಿ ವಿಶೇಷ ರೈಲಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಅದರಂತೆ ಇಂದು ಕೊಂಕಣ ರೈಲ್ವೆಯು ವಿಶೇಷ ರೈಲಿನ ಪ್ರಕಟಣೆ ನೀಡಿದ್ದು, ಸೆಪ್ಟೆಂಬರ್ 6 ರಂದು ಮಧ್ಯಾಹ್ನ 12 ಕ್ಕೆ ಮಡಗಾಂವ್ ಬಿಡುವ ರೈಲು ಸಂಜೆ 4.20 ಕ್ಕೆ ಕುಂದಾಪುರ ತಲುಪಿ, ಮರುದಿನ ಮದ್ಯಾಹ್ನ 12ಕ್ಕೆ ವೇಲಂಕಣಿ ತಲುಪಲಿದೆ. ಅದೇ ದಿನ ರಾತ್ರಿ 11.50 ಕ್ಕೆ ಹೊರಟು ಮರುದಿನ ಸಂಜೆ 6.40 ಕ್ಕೆ ಕುಂದಾಪುರ ಮೂಲಕ ರಾತ್ರಿ 11 ಕ್ಕೆ ಮಡಗಾಂವ್ ತಲುಪಲಿದೆ.

error: Content is protected !!
Scroll to Top