ಕೆಲವರು ಊರಿನಲ್ಲಿ ಡೋಂಗಿ ಮಾಡಿ ಗಲ್ಫ್ ಗೆ ತೆರಳುತ್ತಾರೆ: ಆಹಾರ ಸಚಿವ ಯು.ಟಿ.ಖಾದರ್ ► ಸಚಿವರ ಹೇಳಿಕೆಗೆ ತಿರುಗಿ ಬಿದ್ದಿರುವ ಗಲ್ಫ್ ನಿವಾಸಿಗಳಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.27. ಕೆಲವು ಪ್ರವಾಸಿಗಳು ಊರಿನಲ್ಲಿ ಡೋಂಗಿ ಮಾಡಿ ಗಲ್ಫ್ ರಾಷ್ಟ್ರಕ್ಕೆ ಹೋಗುತ್ತಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದನ್ನು ಖಂಡಿಸಿರುವ ಗಲ್ಫ್ ನಿವಾಸಿಗಳು ಸಚಿವರ ವಿರುದ್ಧ ಸಮರ ಸಾರಿದ್ದಾರೆ.

ಪುತ್ತೂರು ಸಮೀಪದ ಮಾಡನ್ನೂರು ಮಖಾಂ ಉರೂಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ್ದ ಕರ್ನಾಟಕ ರಾಜ್ಯ ಆಹಾರ ಸಚಿವ ಯು.ಟಿ.ಖಾದರ್, ಇಂದು ಕೆಲವು ಕಡೆಗಳಲ್ಲಿ ದೇಶಕ್ಕೆ ಮಾರಕವಾಗುವ ಕೆಲವು ವಿಚಾರಗಳು ನಡೆಯುತ್ತಿದ್ದು, ಅಂತಹವರಿಗೆ ಯಾರೂ ಬೆಂಬಲವನ್ನು ನೀಡಬಾರದು. ನಾನು ಹಿಂದೂ ಬಾಂಧವರ ಸಮಾರಂಭಗಳಲ್ಲಿ ಭಾಗವಹಿಸುವುದನ್ನೇ ಕತ್ತಲಲ್ಲಿ ಕೂತು ಹೀಯಾಳಿಸುವ ಕೆಲವರು ಊರಲ್ಲಿ ಡೋಂಗಿ ಮಾಡಿ ಗಲ್ಫ್ ರಾಷ್ಟ್ರಕ್ಕೆ ಹೋಗಿ ಅಲ್ಲಿಂದ ಕಮೆಂಟ್ಸ್ ಮಾಡುತ್ತಾರೆ ಎಂದಿದ್ದರು. ಈ ಬಗ್ಗೆ ಸಚಿವ ಯು.ಟಿ.ಖಾದರ್ ಗಲ್ಫ್ ಪ್ರವಾಸಿಗಳನ್ನು ಹೀಯಾಳಿಸಿದ್ದಾರೆ ಎಂದು ಆರೋಪಿಸಿ ಹಲವರು ಇದೀಗ ಸಚಿವರ ವಿರುದ್ಧ ತಿರುಗಿ ಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

Also Read  ವಿಟ್ಲ: ಆಸೀಫಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ ► ಬಿಜೆಪಿ ಮುಖಂಡನ ಕೊಲೆ ಯತ್ನ

error: Content is protected !!
Scroll to Top