ಮಣಿಪಾಲ ಭಾಗದಲ್ಲಿ ಮತ್ತೆ ಹೆಚ್ಚಾದ ಇ-ಸಿಗರೇಟ್ ಹಾವಳಿ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 02.  ಇ-ಸಿಗರೇಟ್ ಮಾರಾಟ ಮಾಡಲು ನಿಷೇಧ ಹೇರಲಾಗಿದೆ. ಆದಗ್ಯೂ ಮಣಿಪಾಲ ಭಾಗದಲ್ಲಿ ಮತ್ತೆ ಇ-ಸಿಗರೇಟ್ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯ ಬದಿ ಇರುವ ಅಂಗಡಿಯಲ್ಲಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಕಾಸರಗೋಡು ಮೂಲದ ಮೊಹಮ್ಮದ್ ಉನೈಶ್(25) ಹಾಗೂ ಸಾವಿರಾರು ರೂ.ಮೌಲ್ಯದ ಇ-ಸಿಗರೇಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಿಷೇಧಿತ ಇ-ಸಿಗರೇಟ್‌ಗಳನ್ನು ಮುಂಬೈಯಿಂದ ಖರೀದಿ ಮಾಡುತ್ತಿದ್ದರು. ಹೀಗೆ ಖರೀದಿಸಿದ ಇ-ಸಿಗರೇಟ್‌ಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕೂಲ್ ಡ್ರಿಂಕ್ಸ್, ಪಫ್ಯೂರ್ಮ್, ಲೈಟರ್‌ಗಳಂತಹ ವಸ್ತುಗಳನ್ನು ಮುಂಬೈಯಿಂದ ಬಸ್ ಹಾಗೂ ರೈಲು ಮಾರ್ಗದ ಮೂಲಕ ಉಡುಪಿ ಜಿಲ್ಲೆಗೆ ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು ಎಂದು ವರದಿ ತಿಳಿದುಬಂದಿದೆ.

Also Read  ಮಂಗಳೂರು: ಈರುಳ್ಳಿ ದರ ಏರಿಕೆ ವಿರುದ್ಧ ‘ನೇಣು ಹಗ್ಗ’ ಪ್ರದರ್ಶಿಸಿ ವಿನೂತನ ಪ್ರತಿಭಟನೆ

 

error: Content is protected !!
Scroll to Top