(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 02. ರಾಜಧಾನಿ ನಗರದಲ್ಲಿ ರಕ್ಕಸ ಬೀದಿನಾಯಿಗಳ ಹುಚ್ಚಾಟ ಮಿತಿ ಮೀರಿದ್ದು, ಕೇವಲ ಎಂಟು ತಿಂಗಳಲ್ಲಿ 16,888 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿದ್ದು, ಇದರ ಜೊತೆಗೆ ನಾಯಿ ಕಡಿತದಿಂದಾಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಬೀದಿನಾಯಿ ಕಚ್ಚಿರುವ ಪ್ರಕರಣಗಳಲ್ಲಿ ಶೇ. 40 ರಷ್ಟು ನಾಯಿಗಳು ಸಾಕು ನಾಯಿಗಳಾಗಿರುವುದರಿಂದ ಜನ ಬೀದಿಯಲ್ಲಿ ಓಡಾಡಬೇಕಾದರೆ ಎಚ್ಚರಿಕೆ ವಹಿಸಬೇಕು ಇಲ್ಲದಿದ್ದರೆ ನಾಯಿ ಕಡಿತಕ್ಕೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎಂಟು ತಿಂಗಳಲ್ಲಿ 16,888 ಮಂದಿಗೆ ನಾಯಿ ಕಚ್ಚಿರುವುದು ಬಿಬಿಎಂಪಿಯ ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ ಈ ಪೈಕಿ ಪೂರ್ವ ಮತ್ತು ಪಶ್ಚಿಮ ವಲಯದಲ್ಲೇ ಅತಿ ಹೆಚ್ಚು ನಾಯಿಗಳ ದಾಳಿ ಪ್ರಕರಣಗಳು ನಡೆದಿರುವುದು ವರದಿಯಲ್ಲಿ ಬಯಲಾಗಿದೆ.