ಎಎಪಿ ಶಾಸಕರ ನಿವಾಸಕ್ಕೆ ಇಡಿ ಅಧಿಕಾರಿಗಳ ದಾಳಿ ಅಮಾನತುಲ್ಲಾ ಖಾನ್ ಆಕ್ರೋಶ       

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 02.  ಶಾಸಕರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕ ಅಮಾನತುಲ್ಲಾ ಖಾನ್ ಅವರ ನಿವಾಸಕ್ಕೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅದರಲ್ಲಿ ಇಡಿ ತಂಡವು ಅವರನ್ನು ಬಂಧಿಸಲು ಯೋಜಿಸಿದೆ ಎಂದು ಹೇಳಿದ್ದಾರೆ. “ಶೋಧನೆಯ ನೆಪದಲ್ಲಿ ಇಡಿ ತಂಡ ನನ್ನನ್ನು ಬಂಧಿಸಲು ಬಂದಿದೆ. ನನಗೆ ಮತ್ತು ಆಪ್ ನಾಯಕರಿಗೆ ಕಿರುಕುಳ ನೀಡಲು ಅವರು ಈ ರೀತಿ ಮಾಡುತ್ತಿದ್ದಾರೆ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ಅಪರಾಧವೇ? ಈ ಸರ್ವಾಧಿಕಾರ ಎಷ್ಟು ದಿನ ಉಳಿಯುತ್ತದೆ? ಎಂದು ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.

Also Read  ನಾಳೆಯಿಂದ ಐದು ದಿನಗಳ ಕಾಲ ಬ್ಯಾಂಕುಗಳು ಮುಚ್ಚಲಿವೆ.!! ► ಕಾರಣವೇನೆಂದು ಗೊತ್ತೇ..?

 

error: Content is protected !!
Scroll to Top