ಪ್ರೀತಿಸುವಂತೆ ನಾಲ್ವರು ಬಾಲಕರ ನಿರಂತರ ಕಿರುಕುಳ..!   ಬಾಲಕಿ ಆತ್ಮಹತ್ಯೆಗೆ ಶರಣು..!

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ. 02.  ಪ್ರೀತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕರಿಂದ ನಿರಂತರ ಕಿರುಕುಳ ತಾಳಲಾರದೆ ಬಾಲಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಹನಕೆರೆ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕಿ ಇಂಪನಾ (14) ಎಂದು ಗುರುತಿಸಲಾಗಿದೆ. ಮಂಡ್ಯದ ವಿವೇಕ ವಿದ್ಯಾಸಂಸ್ಥೆಯ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಾಲಕಿಗೆ ಪ್ರೀತಿಸುವಂತೆ ನಾಲ್ವರು ಬಾಲಕರು ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ಆರೋಪಿಸಿದ್ದಾರೆ ಎಂದು ವರದಿ ತಿಳಿದುಬಂದಿದೆ.

Also Read  ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ನೆರೆನೀರು ► ರಸ್ತೆ ತಡೆಯಿಂದಾಗಿ ಕಿ.ಮೀ. ಗಟ್ಟಲೆ ಸಾಲುಗಟ್ಟಿ‌ ನಿಂತ ವಾಹನಗಳು ► ಉದನೆ ಪೇಟೆ, ಅಡ್ಡಹೊಳೆ ಕಾಲನಿ ಜಲಾವೃತ

 

error: Content is protected !!
Scroll to Top