ಹಿರಿಯ ನಾಗರಿಕರಿಗೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02. 2024ನೇ ಸಾಲಿನ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಸೆಪ್ಟೆಂಬರ್ 10 ರಂದು ನಗರದ ಲಾಲ್‍ ಬಾಗ್‍ನಲ್ಲಿರುವ ಮಂಗಳಾ ಸ್ಟೇಡಿಯಂ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ನಾಗರಿಕರ ವಯೋಮಿತಿ ಆಧಾರದ ಮೇಲೆ ಬೆಳಿಗ್ಗೆ 9 ಗಂಟೆಯಿಂದ ಕ್ರೀಡಾ ಸ್ಪರ್ಧೆ ಪ್ರಾರಂಭವಾಗಲಿದೆ.

ಕ್ರೀಡಾ ಸ್ಪರ್ಧೆಗಳು :-
ಮ್ಯೂಸಿಕಲ್ ಚೇರ್ ಪುರುಷರು/ಮಹಿಳೆಯರು 60 ರಿಂದ 70 ವರ್ಷ. ಬಿರುಸಿನ ನಡಿಗೆ ಪುರುಷರು/ಮಹಿಳೆಯರು 60 ರಿಂದ 69 ವರ್ಷ, 70 ವರ್ಷ ಹಾಗೂ ಮೇಲ್ಪಟ್ಟವರು. ಬಕೆಟ್‍ನಲ್ಲಿ ಬಾಲ್ ಎಸೆಯುವುದು ಪುರುಷರು/ಮಹಿಳೆಯರು 60 ರಿಂದ 69 ವರ್ಷ, 70 ವರ್ಷ ಹಾಗೂ ಮೇಲ್ಪಟ್ಟವರು.

ಸಾಂಸ್ಕೃತಿಕ ಸ್ಪರ್ಧೆಗಳು :-
ಗಾಯನ ಸ್ಪರ್ಧೆ ಪುರುಷರು/ಮಹಿಳೆಯರು 60 ರಿಂದ 69 ವರ್ಷ, 70 ವರ್ಷ ಹಾಗೂ ಮೇಲ್ಪಟ್ಟವರು. ಏಕ ಪಾತ್ರಾಭಿನಯ ಪುರುಷರು/ಮಹಿಳೆಯರು 60 ರಿಂದ 69 ವರ್ಷ, 70 ವರ್ಷ ಹಾಗೂ ಮೇಲ್ಪಟ್ಟವರು.

Also Read  ಎಲ್ಲರ ಚಿತ್ತ ಸಂಪುಟ ವಿಸ್ತರಣೆಯತ್ತ..‼️ ➤ ಸುಳ್ಯದ ಬಂಗಾರ ಎಸ್. ಅಂಗಾರರಿಗೆ ಸಚಿವ ಸ್ಥಾನ..⁉️

ಇತರೆ ಸ್ಪರ್ಧೆಗಳು :-
ಚಿತ್ರಕಲೆ ಸ್ಪರ್ಧೆ ಪುರುಷರು/ಮಹಿಳೆಯರು 60 ರಿಂದ 69 ವರ್ಷ, 70 ವರ್ಷ ಹಾಗೂ ಮೇಲ್ಪಟ್ಟವರು. ಪುಸ್ತಕ ಸಮತೋಲನಾ ನಡಿಗೆ. ಲಿಂಬೆ ಚಮಚದಲ್ಲಿ ನಡಿಗೆ. ಚೆಂಡು ಎಸೆತ. ಗುಂಡು ಎಸೆತ.

ಸೂಚನೆಗಳು:
ಒಬ್ಬರಿಗೆ ಮೂರು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ (ಕ್ರೀಡೆ, ಸಾಂಸ್ಕೃತಿಕ ಹಾಗೂ ಇತರ ಸ್ಪರ್ಧೆಗಳಲ್ಲಿ ಸೇರಿ ಒಟ್ಟು ಮೂರು).  ಸ್ಪರ್ಧೆಗೆ ಭಾಗವಹಿಸುವವರು ಸೆಪ್ಟೆಂಬರ್ 7ರಂದು ಸಂಜೆ 5.30ರ ಒಳಗೆ ದೂರವಾಣಿ ಸಂಖ್ಯೆ: 0824-2458173 ಅಥವಾ 0824-2455999ಯನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಬೇಕು. ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಿದ ಕ್ರೀಡಾ ಸ್ಪರ್ಧೆಗಳ 60 ರಿಂದ 69 ವರ್ಷದ ವಯೋಮಾನದ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದಿರುವ ಮಹಿಳೆ ಮತ್ತು 60 ರಿಂದ 69 ವರ್ಷ ವಯೋಮಾನದ ಬಿರುಸಿನ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಪುರುಷ ಹಿರಿಯ ನಾಗರಿಕರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುತ್ತದೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಅಕ್ಟೋಬರ್ 1ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಸಮಯದಲ್ಲಿ ವಿತರಿಸಲಾಗುತ್ತದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಕಲ್ಯಾಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top