ಲವಿ ಗಂಜಿಮಠ ಆಪ್ಟೆಂ ಶೆತ್ ಪತ್ರಿಕೆಗೆ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ 2024’ ಪ್ರಧಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02.  ಕೊಂಕಣಿ ಲೇಖಕಿ ಲವಿ ಗಂಜಿಮಠ ಅವರಿಗೆ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ 2024’ ಹಾಗೂ ಬಜೆಧರ್ಮ ಕೇಂದ್ರದ ‘ಆಪ್ಟೆಂ ಶೆತ್’ ಎಂಬ ಪತ್ರಿಕೆಗೆ ‘ಧರ್ಮಕೇಂದ್ರದ ಅತ್ಯುತ್ತಮ ಪತ್ರಿಕೆ 2024’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಮಂಗಳೂರು ಧರ್ಮಾಧ್ಯಕ್ಷರ ನಿವಾಸದ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ, ಮಂಗಳೂರು ಬಿಷಪ್ ಅ.ವಂ. ಡಾ.ಪೀಟರ್ ಪೌಲ್ ಸಲ್ಡಾನ್ಹಾ ಪ್ರಶಸ್ತಿ ಪ್ರದಾನ ಮಾಡಿದರು. ‘ರಾಕ್ಣೊ’ ವಾರಪತ್ರಿಕೆಯ ಸಂಪಾದಕ ವಂ. ರೂಪೇಶ್ ಮಾಡ್ತಾ ಪ್ರಶಸ್ತಿಯ ಕುರಿತು ವಿವರಣೆ ನೀಡಿದರು. ಡಾ.ಎಡ್ವರ್ಡ್ ನಬ್ರೆತ್ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಬಳಿಕ ವಂ. ರೂಪೇಶ್ ಮಾಡ್ತಾ ಸಂವಾದ ನಡೆಸಿಕೊಟ್ಟರು. ಎಲ್ಲಾ ಅತಿಥಿಗಳಿಗೆ ಹಾಗೂ ಭಾಷಣಕಾರರಿಗೆ ನೆನಪಿನ ಕಾಣಿಕೆಯಾಗಿ ಪುಸ್ತಕವನ್ನು ನೀಡಲಾಯಿತು ಎಂದು ವರದಿ ತಿಳಿಸಿದೆ.

Also Read  ಅಸುರಕ್ಷಿತ ಡಾಮರು, ಜಲ್ಲಿ ಸಾಗಾಟ: ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲು

 

error: Content is protected !!
Scroll to Top