ನಾಪತ್ತೆಯಾಗಿದ್ದ ಮಹಿಳೆ ಬಾವಿಯಲ್ಲಿ ಜೀವಂತವಾಗಿ ಪತ್ತೆ..!

(ನ್ಯೂಸ್ ಕಡಬ) newskadaba.com ಗದಗ, ಆ. 31.  ಗದಗ ಜಿಲ್ಲೆಯ ತೋಟಗಂಟಿ ಗ್ರಾಮದಿಂದ ಆಗಸ್ಟ್ 20 ರಂದು ನಾಪತ್ತೆಯಾಗಿದ್ದ ಮಹಿಳೆ ಮೂರು ದಿನಗಳ ನಂತರ ಗ್ರಾಮದ ಹೊರವಲಯದ ಪಾಳು ಬಾವಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.

ಆಕೆ ಈಗ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೋಟಗಂಟಿ ಗ್ರಾಮದ ಪಾರ್ವತಿ ಕಲ್ಮಠ ಅವರು ಆ.20ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಪರಿಚಿತ ಮಹಿಳೆ ಮನೆಗೆ ನುಗ್ಗಿ, ನನ್ನನ್ನು ಗ್ರಾಮದ ಪ್ರತ್ಯೇಕ ಸ್ಥಳಕ್ಕೆ ಎಳೆದೊಯ್ದಳು, ಅಲ್ಲಿ ಅವಳು ನನ್ನ ಮಂಗಳಸೂತ್ರ, ಬಳೆಗಳು ಮತ್ತು ಇತರ ಆಭರಣಗಳನ್ನು ಕಸಿದುಕೊಂಡು ಖಾಲಿ ಬಾವಿಗೆ ತಳ್ಳಿದಳು ಎಂದು ಪಾರ್ವತಿ ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

Also Read  ಬಸ್‌ ಗಾಗಿ ಕಾದು ನಿಂತಿದ್ದವರಿಗೆ ಕಾರು ಢಿಕ್ಕಿ -  ಇಬ್ಬರು‌ ಸ್ಥಳದಲ್ಲೇ ಮೃತ್ಯು

 

error: Content is protected !!
Scroll to Top