ಮಳೆ ಮತ್ತು ಗಾಳಿಯಿಂದ ಬಿದ್ದ ಮರಗಳ ವ್ಯವಸ್ಥಿತ ನಿರ್ವಹಣೆ  ಬಿಬಿಎಂಪಿ 28 ತಂಡಗಳ ರಚನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31.  ಮಳೆ ಮತ್ತು ಗಾಳಿಯಿಂದ ಬಿದ್ದ ಮರಗಳನ್ನು ತ್ವರಿತವಾಗಿ ನಿರ್ವಹಿಸಲು ಮತ್ತು ತೆರವುಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 28 ತಂಡಗಳನ್ನು ರಚಿಸಿದೆ.

ಎಂಟು ಸದಸ್ಯರು ಮತ್ತು ತೆರವು ವಾಹನ ಒಳಗೊಂಡಿರುವ ‘ಮರಗಳ ವ್ಯವಸ್ಥಿತ ನಿರ್ವಹಣಾ ತಂಡ’ ಮಳೆಗಾಲದಲ್ಲಿ ದುರ್ಬಲಗೊಳ್ಳಬಹುದಾದ ಹಳೆಯ ಮರಗಳು ಮತ್ತು ದುರ್ಬಲವಾದ ರೆಂಬೆ-ಕೊಂಬೆಗಳನ್ನು ಗುರುತಿಸುವ ಕಾರ್ಯ ಮಾಡುತ್ತದೆ. ಮಳೆಗಾಲದಲ್ಲಿ ಗಾಳಿ ಹೆಚ್ಚಾಗಿ ನಗರದ ಹಲವೆಡೆ ಮರಗಳು, ರೆಂಬೆ ಕೊಂಬೆಗಳು ಬೀಳುವುದರಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಾಹನಗಳು ಸೇರಿದಂತೆ ಆಸ್ತಿಪಾಸ್ತಿಗೆ ಹಾನಿಯಾಗುತ್ತಿದ್ದು,  ಮರಗಳ ವ್ಯವಸ್ಥಿತ ನಿರ್ವಹಣೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

 

 

error: Content is protected !!

Join the Group

Join WhatsApp Group