ನಕಲಿ ದಾಖಲೆ ನೀಡಿ ವಂಚನೆ- 3 ಸರ್ಕಾರಿ ನೌಕರರು ಸೇರಿ 48 ಮಂದಿ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 30. ನಕಲಿ ದಾಕಲೆ ಸೃಷ್ಟಿಸಿ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್‌ ಲ್ಯಾಗ್‌ ಹುದ್ದೆ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪದಡಿ 11 ಮಧ್ಯವರ್ತಿಗಳು ಹಾಗೂ 37 ಅನರ್ಹ ಅಭ್ಯರ್ಥಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 40 ಲಕ್ಷ ಬೆಲೆಯ 2 ಕಾರುಗಳು, 17 ಮೊಬೈಲ್‌ಗಳು ಹಾಗೂ ಹಾರ್ಡ್‌ ಡಿಸ್ಕ್‌ನ್ನು ವಶಪಡಿಸಿಕೊಂಡಿರುವ ಕುರಿತು ವರದಿಯಾಗಿದೆ.

2022ನೇ ಸಾಲಿನ ಅಕ್ಟೋಬರ್‌ ತಿಂಗಳಿನಲ್ಲಿ ಶೇಷಾದ್ರಿಪುರಂನ ಜಲಸಂಪನೂಲ ಇಲಾಖೆಯಿಂದ ‘ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್‌ ಲಾಗ್‌ ಹುದ್ದೆಗಳಿಗೆ ಆನ್‌ ಲೈನ್‌ ಮೂಲಕ 182 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿಲಾಗಿತ್ತು. ಈ ಪೈಕಿ ಒಟ್ಟು 62 ಅಭ್ಯರ್ಥಿಗಳು ಇಲಾಖೆಯು ಸೂಚಿಸಿದಂತಹ ಮಾನದಂಡಕ್ಕೆ ಒಳಪಟ್ಟಿರಲಿಲ್ಲ. ಹೀಗಾಗಿ ಅವರು ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಜಾಲದೊಂದಿಗೆ ಸಂಪರ್ಕ ಹೊಂದಿದ್ದು, ಪ್ರತೀ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವಂತೆ ಕಂಡುಬರುವ ಅನಧಿಕೃತವಾಗಿ ಸೃಷ್ಟಿಸಿದ 12ನೇ ತರಗತಿಯ ಸಿಬಿಎಸ್‌‍ಸಿ ಮತ್ತು ದ್ವಿತೀಯ ಪಿಯುಸಿಗೆ ತತ್ಸಮಾನವಾದ ಎನ್‌ಐಓಎಸ್ ಅಂಕಪಟ್ಟಿಗಳನ್ನು ಪಡೆದುಕೊಂಡು, ಜಲಸಂಪನೂಲ ಇಲಾಖೆಗೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರು. ಇದರಿಂದಾಗಿ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ವಂಚನೆಯಾಗಿತ್ತು. ದಾಖಲಾತಿಗಳ ಪರಿಶೀಲನೆಯನ್ನು ನಡೆಸಿದ ಇಲಾಖೆಯವರು ಅಂಕಪಟ್ಟಿಗಳಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಶೇಷಾದ್ರಿಪುರಂ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಮುಂದುವರೆಸಿದ ಸಿಸಿಬಿ ಪೊಲೀಸರು, ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳು ಆನ್‌ ಲೈನ್‌ ಮೂಲಕ ಅನಧಿಕೃತವಾಗಿ ಸೃಷ್ಟಿಸಿದ್ದ ಅಂಕಪಟ್ಟಿಯನ್ನು ಒಟ್ಟು 12 ಜಿಲ್ಲೆಗಳಿಂದ ಪತ್ತೆಹಚ್ಚಿದ್ದಾರೆ.ಅರ್ಜಿ ಸಲ್ಲಿಸಿದ್ದ 62 ಅಭ್ಯರ್ಥಿಗಳ ಪೈಕಿ ಕಲ್ಬುರ್ಗಿ ಜಿಲ್ಲೆಯಿಂದ 25 ಅಭ್ಯರ್ಥಿಗಳು, ಹಾಸನ 12, ವಿಜಯಪುರ 8, ಬೀದರ್‌ 6, ಬೆಳಗಾವಿ 3, ಯಾದಗಿರಿ 2, ಚಿತ್ರದುರ್ಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ವಿಜಯನಗರದ ತಲಾ ಒಬ್ಬರು, ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿರುವುದನ್ನು ಪತ್ತೆ ಮಾಡಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

error: Content is protected !!

Join the Group

Join WhatsApp Group