ಕೆನಡಾದಲ್ಲಿ ವಲಸೆ ನೀತಿ ಬದಲಿಸಲು ಆಗ್ರಹ   ವಿದೇಶಿ ವಿದ್ಯಾರ್ಥಿಗಳಿಂದ ಪ್ರತಿಭಟನೆ 

(ನ್ಯೂಸ್ ಕಡಬ) newskadaba.com ಟೊರಾಂಟೋ, ಆ. 30.  ಕೆನಡಾ ಸರ್ಕಾರದ ವಲಸೆ ನೀತಿಯಿಂದಾಗಿ ಅಲ್ಲಿ ಸುಮಾರು 70 ಸಾವಿರ ವಿದೇಶಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ಭಾರತೀಯರೇ ಬಹು ಸಂಖ್ಯಾತರು. ಈ ಕಾರಣದಿಂದಾಗಿ ಸರ್ಕಾರ ಕೂಡಲೇ ತನ್ನ ವಲಸೆ ನೀತಿ ಬದಲಿಸಬೇಕು ಎಂದು ಆಗ್ರಹಿಸಿ ವಿದೇಶಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ.

ಪ್ರತಿಭಟನೆಗಳಲ್ಲಿ ಕೆನಡಾ ದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ಮಾತ್ರವಲ್ಲ ಕುಶಲಕರ್ಮಿಗಳು, ವೃತ್ತಿಪರ ಕೌಶಲ್ಯ ಹೊಂದಿರುವ ಉದ್ಯೋಗಿಗಳೂ ಸೇರಿಕೊಂಡಿದ್ದಾರೆ. ಒಂದು ವೇಳೆ ಸರ್ಕಾರ ತನ್ನ ವಲಸೆ ನೀತಿ ಬದಲಿಸದಿದ್ದರೆ ಸಾವಿರಾರು ಮಂದಿ ಕೆನಡಾದಿಂದ ಗಡಿಪಾರಾಗಿ ತಮ್ಮ ತವರು ದೇಶಕ್ಕೆ ವಾಪಸ್ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇಲ್ಲಿನ ಸರ್ಕಾರ ವಿದೇಶಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಶಾಶ್ವತ ನಿವಾಸಿ ದರ್ಜೆ ನೀಡುವ ಪ್ರಮಾಣವನ್ನು ಶೇ. 25ರಷ್ಟು ಕಡಿತಗೊಳಿಸಿದೆ. ಹೀಗಾಗಿ, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಆಕ್ರೋಶಗೊಂಡಿದ್ದಾರೆ, ತಮ್ಮ ಹಕ್ಕುಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆನಡಾದ ಹಲವು ನಗರಗಳಲ್ಲಿ ಈ ಪ್ರತಿಭಟನೆ ನಡೆದಿದೆ ಎಂದು ವರದಿಯಾಗಿದೆ.

Also Read  ಈ ದಿನದ ದ್ವಾದಶ ರಾಶಿ ಫಲವನ್ನು ತಿಳಿಯೋಣ ಗಿರಿಧರ ಭಟ್ ರವರಿಂದ

 

error: Content is protected !!
Scroll to Top