’ಪ್ರಚೋದನೆ, ದಂಗೆ ಮಾಡಿಸುವುದು ಸಂಘಪರಿವಾದ ತರಬೇತಿಯಾಗಿದೆ’  ಸಚಿವ ದಿನೇಶ್ ಗುಂಡೂರಾವ್                                    

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 30.  ಸುಳ್ಳನ್ನು ಸತ್ಯ ಮಾಡಿಸುವುದೇ ಆರ್‌ಎಸ್‌ಎಸ್ ತರಬೇತಿಯಾಗಿದೆ. ಪ್ರಚೋದನೆ, ದಂಗೆ ಮಾಡಿಸುವುದು ಸಂಘಪರಿವಾದ ತರಬೇತಿಯಾಗಿದೆ. ಕಾಂಗ್ರೆಸ್ ಬಿಜೆಪಿಯ ಕುತಂತ್ರಕ್ಕೆ ಹೆದರೋದೆ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ನ್ಯಾಯಾಧೀಶರು ತೀರ್ಮಾನ ಮಾಡುತ್ತಾರೆ. ರಾಜ್ಯಪಾಲರ ಪಕ್ಷಪಾತದ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಅತೀ ಶೀಘ್ರದಲ್ಲಿ ಅನುಮತಿ ನೀಡಿರುವುದು ದಾಖಲೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗ, ಭ್ರಷ್ಟಚಾರವನ್ನು ಮಾಡಿಲ್ಲ. ಬಿಜೆಪಿಯವರು ಸುಳ್ಳನ್ನು ಸತ್ಯವಾಗಿಸಲು ಹೊರಟಿದ್ದಾರೆ. ಸಿಎಂ ಸಿದ್ಧರಾಮಯ್ಯನವರದ್ದು ಬಹಳ ಸ್ಪಷ್ಟವಾದ ನಡೆ ಎಂದು ತಿಳಿಸಿದರು ಎನ್ನಲಾಗಿದೆ.

Also Read  ಪದಗ್ರಹಣ ಸಮಾರಂಭಕ್ಕೆ ರೈಲಿನಲ್ಲಿ ಆಗಮಿಸಿ, ಸರಳತೆ ಮೆರೆದ ಶಾಸಕ.!

 

error: Content is protected !!
Scroll to Top