ತೆನೆ ಹಬ್ಬದ ಅಂಗವಾಗಿ ಬಸ್ರೂರು ಸಂತ ಫಿಲೀಪ್ ನೇರಿ ಚರ್ಚ್ ನಲ್ಲಿ 9 ದಿನದ ನೊವೆನಾ ಪ್ರಾರ್ಥನೆಗೆ ಚಾಲನೆ ಚರ್ಚ್ ನ ಧರ್ಮಗುರು ವಂದನೀಯ ರೋಯ್ ಲೋಬೋ ನೆರವೇರಿಸಿದರು

(ನ್ಯೂಸ್ ಕಡಬ) newskadaba.com ಕುಂದಾಪುರ, ಆ. 30.  ಮೊಂತಿ ಫೆಸ್ಟ್ ಅಥವಾ ತೆನೆ ಹಬ್ಬದ ಅಂಗವಾಗಿ ಬಸ್ರೂರು ಸಂತ ಫಿಲೀಪ್ ನೇರಿ ಚರ್ಚ್ ನಲ್ಲಿ 9 ದಿನದ ನೊವೆನಾ ಪ್ರಾರ್ಥನೆಗೆ ಇಂದು ಚಾಲನೆ ನೀಡಲಾಯಿತು.

ಸಂತ ಫಿಲೀಪ್ ನೇರಿ ಚರ್ಚ್‍ನಲ್ಲಿ 9 ದಿನದ ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಿದ ಚರ್ಚ್ ನ ಧರ್ಮಗುರುಗಳು ವಂದನೀಯ ರೋಯ್ ಲೋಬೋ ದಿವ್ಯ ಬಲಿಪೂಜೆ ನೆರವೇರಿಸಿ, ಮೇರಿ ಮಾತೆಗೆ ನೊವೆನಾ ಪ್ರಾರ್ಥನೆ ಸಲ್ಲಿಸಿದರು. ಬ್ರದರ್ ವಿಲ್ಸನ್ ಸಲ್ಡಾನ ಪ್ರವಚನ ನೀಡಿದರು. ಒಂಭತ್ತು ದಿನಗಳ ಕಾಲ ನಡೆಯುವ ನೊವೆನಾ ಪ್ರಾರ್ಥನೆಯಲ್ಲಿ ವಿಶೇಷವಾಗಿ ಚಿಕ್ಕ ಚಿಕ್ಕ ಮಕ್ಕಳು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಸಮರ್ಪಿಸುವುದು ವಿಶೇಷ ಎನ್ನಲಾಗಿದೆ.

Also Read  ಗಡಿಯಾರ: ಕಂಟೈನರ್ ಢಿಕ್ಕಿ ಆಟೊ ಚಾಲಕ ಸಹಿತ ಇಬ್ಬರು ಪಾರು

 

 

error: Content is protected !!
Scroll to Top