(ನ್ಯೂಸ್ ಕಡಬ) newskadaba.com ಕಡಬ, ಫೆ.26. 102 ನೇ ನೆಕ್ಕಿಲಾಡಿ ಗ್ರಾಮದ ಕೆರ್ಮಾಯಿ ಎಂಬಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಉದ್ದೇಶಕ್ಕಾಗಿ, ಜಿಲ್ಲಾ ಪಂಚಾಯತ್ ಅನುದಾನದಲ್ಲಿ ತೆಗೆಯಲಾದ ಕೊಳವೆ ಬಾವಿಯನ್ನು ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮರ್ದಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಲಿತ, ಸದಸ್ಯರುಗಳಾದ ಸುಲೈಮಾನ್, ಹರೀಶ್ ಕೊಡಂದೂರು, ಡಿ.ಪಿ. ದಾಮೋದರ ಗೌಡ, ಪಂಚಾಯತ್ ಲೆಕ್ಕಪರಿಶೋಧಕ ಭುವನೇಂದ್ರ, ಕಾರ್ಯದರ್ಶಿ ವೆಂಕಟ್ರಮಣ ಗೌಡ, ಪಂಚಾಯತ್ ಸಿಬಂದಿಗಳಾದ ವಾಮನ ನಾಯ್ಕ್, ಹಸನ್, ನೀರಿನ ಪಲಾನುಭವಿಗಳು ಹಾಗೂ ಊರವರು ಉಪಸ್ಥಿತರಿದ್ದರು.