(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 30. ಇತ್ತೀಚೆಗೆ ರಾಜ್ಯದ ಹಲವೆಡೆ ರಸ್ತೆ ಅವಘಡ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದಾಂಧಲೆ ನಡೆಸುವುದು ಕಂಡು ಬರುತ್ತಿದೆ. ಹೀಗಾಗಿ ಅಂತವರ ವಿರುದ್ದ ಖಡಕ್ ಕ್ರಮಕ್ಕೆ ಮುಂದಾಗಿರುವ ಪೊಲೀಸರು, ಇಂತಹ ಪ್ರಕರಣದಲ್ಲಿ ಭಾಗಿಯಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ಅತಿರೇಕದ ಜಗಳಗಳಿಗೆ ಅವಕಾಶವಿಲ್ಲ. ನಿಮ್ಮ ಆಕ್ರೋಶವನ್ನು ಬದಿಗೊತ್ತಿ, ತಾಳ್ಮೆಯನ್ನು ತಂದುಕೊಳ್ಳಿ. ರಸ್ತೆ ಜಗಳ ಅಪಾಯಕಾರಿಯಷ್ಟೇ ಅಲ್ಲ, ಕ್ರಿಮಿನಲ್ ಅಪರಾಧ ಕೂಡ. ಅದರಲ್ಲಿ ಭಾಗಿಯಾದರೆ ಕಾನೂನು ಕ್ರಮ ನಿಶ್ಚಿತ. ಇಂತಹ ಪರಿಸ್ಥಿತಿಯಲ್ಲಿ ನೆರವು ಪಡೆಯಲು ನಮ್ಮ 112ಗೆ ಕರೆ ಮಾಡಿ ಎಂದು ನಗರ ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದಾರೆ.