ಬಸ್-ಆಟೋ ಡಿಕ್ಕಿ  ಚಿಕಿತ್ಸೆ ಸ್ಪಂದಿಸದೆ ಆಟೋ ಚಾಲಕ ಮೃತ್ಯು..! 



(ನ್ಯೂಸ್ ಕಡಬ) newskadaba.com ಮಂಗಳೂರು, ಆ. 30. ಬಸ್ ಆಟೋ ಡಿಕ್ಕಿಯಾಗಿ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಮಂಗಳೂರು ನಗರದ ಹಂಪನಕಟ್ಟೆ ಖಾಸಗಿ ಹೊಟೇಲ್ ಬಳಿ ಇಂದು ನಡೆದಿದೆ.







ಅವಘಡದಲ್ಲಿ ಆಟೋ ಚಾಲಕ ದೇವರಾಜ್ ಅವರಿಗೆ ಗಂಭೀರ ಗಾಯವಾಗಿದ್ದರಿಂದ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದೇವರಾಜ್ ಅವರು, ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸ್ಥಳಕ್ಕೆ ಮಂಗಳೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.






 

error: Content is protected !!
Scroll to Top