ಇಂದು ಉಸ್ತುವಾರಿ ಸಚಿವರ ದ.ಕ ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 30. ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಆಗಸ್ಟ್ 30 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ.

ಅಗಸ್ಟ್ 30 ರಂದು ಶುಕ್ರವಾರ ಬೆಳಿಗ್ಗೆ 8.15 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ. ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ 2024-25ನೇ ಸಾಲಿನ ಪ್ರಥಮ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಕೆಡಿಪಿ ಮುಂದುವರಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿ. ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಂಆರ್‍ ಪಿಎಲ್ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ. ಸಂಜೆ 5:00 ಗಂಟೆಗೆ ಮಂಗಳೂರಿನ ಪಣಂಬೂರು ಬೀಚ್‍ ನಲ್ಲಿ ಪ್ಲಾಸ್ಟಿಕ್  ವೇಸ್ಟ್ ಕಲೆಕ್ಷನ್ ಕಿಯೋಸ್ಕ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮ. ಸಂಜೆ 6 ಗಂಟೆಗೆ ಇಂಡಿಯಾನ ಆಸ್ಪತ್ರೆಯ ಸಭಾಂಗಣದಲ್ಲಿ ಇಂಡಿಯಾನ ಕ್ಯಾನ್ಸರ್ ಕೇಂದ್ರದ ಅನಾವರಣ ಹಾಗೂ ಹೊಸ ಓಪಿ ಬ್ಲಾಕ್ ಉದ್ಘಾಟನೆ. ಸಂಜೆ 8.15 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಸಚಿವರು ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.

Also Read  ದೇಗುಲದ ಆವರಣದಲ್ಲೇ ರೌಡಿಶೀಟರ್ ಕೊಲೆ..!

error: Content is protected !!
Scroll to Top