ಮುಸ್ಲಿಂ ವಿವಾಹ ಕಾನೂನು ರದ್ದುಗೊಳಿಸುವ ಮಸೂದೆ ಅಂಗೀಕರಿಸಿದ ಅಸ್ಸಾಂ ವಿಧಾನಸಭೆ

(ನ್ಯೂಸ್ ಕಡಬ) newskadaba.com ಗುವಾಹಟಿ, ಆ. 29. ಮುಸ್ಲಿಮರ ವಿವಾಹ ಮತ್ತು ವಿಚ್ಛೇದನವನ್ನು ನೋಂದಾಯಿಸುವ ಮುಸ್ಲಿಂ ವಿವಾಹ ಕಾನೂನು ರದ್ದುಗೊಳಿಸುವ ಮಸೂದೆಯನ್ನು ಅಸ್ಸಾಂ ವಿಧಾನಸಭೆ ಅಂಗೀಕರಿಸಿದೆ ಎಂದು ವರದಿಯಾಗಿದೆ.

ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಜೋಗೆನ್ ಮೋಹನ್ ಅವರು ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ನೋಂದಣಿ ಕಾಯಿದೆ – 1935 ರದ್ದುಗೊಳಿಸುವ ಮಸೂದೆ ಮತ್ತು ರದ್ದುಗೊಳಿಸುವ ಸುಗ್ರೀವಾಜ್ಞೆ 2024 ಅನ್ನು ವಿಧಾನಸಭೆಯಲ್ಲಿ ಆಗಸ್ಟ್ 22 ರಂದು ಮಂಡಿಸಿದ್ದರು. ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ನಮ್ಮ ಉದ್ದೇಶ ಬಾಲ್ಯವಿವಾಹಗಳನ್ನು ನಿರ್ಮೂಲನೆ ಮಾಡುವುದು ಮಾತ್ರವಲ್ಲ, ಕಾಜಿ ಪದ್ಧತಿಯಿಂದ ದೂರವಾಗುವುದು. ನಾವು ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ನೋಂದಣಿಯನ್ನು ಸರ್ಕಾರಿ ವ್ಯವಸ್ಥೆಯಡಿ ತರಲು ಬಯಸುತ್ತೇವೆ” ಎಂದರು.

Also Read  ’ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಮತ್ತೆ ನೀಡುತ್ತೇವೆ’- ಡಿ.ಕೆ.ಶಿವಕುಮಾರ್ ಭರವಸೆ

 

 

error: Content is protected !!
Scroll to Top