ಪುತ್ತೂರು: ಸರಕಾರಿ ITI ಸಂಸ್ಥೆಗೆ ಅನುಮತಿ ನೀಡುವಂತೆ ಸಚಿವರಿಗೆ ಅಶೋಕ್ ರೈ ಮನವಿ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 29. ತಾಲೂಕಿನಲ್ಲಿ ಸರಕಾರಿ ಐಟಿಐ ಸಂಸ್ಥೆಗಳ ಕೊರತೆ ಇದ್ದು ಅದನ್ನು ಪರಿಹರಿಸಲು ಹೊಸ ಸರಕಾರಿ ಐಟಿಐ ಸಂಸ್ಥೆಯನ್ನು ಮಂಜೂರು‌ಗೊಳಿಸಿದ ಅನುದಾನ ನೀಡುವಂತೆ ಶಾಸಕ ಅಶೋಕ್ ರೈ ಅವರು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.


ಪುತ್ತೂರು ತಾಲ್ಲೂಕಿನ ಹೊರಭಾಗದಿಂದ ಅನೇಕ ವಿದ್ಯಾರ್ಥಿಗಳು ಕೈಗಾರಿಕಾ ತರಬೇತಿ ಕೋರ್ಸ್‌ಗಳನ್ನು ವಿದ್ಯಾಭ್ಯಾಸ ಮಾಡಲು ಬರುತ್ತಿರುವುದರಿಂದ ಪ್ರಸ್ತುತ ತಾಲೂಕಿನಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ಕೊರತೆ ಇದೆ. ಆದುದರಿಂದ ಕಾಲೇಜು ನಿರ್ಮಾಣಕ್ಕಾಗಿ ಈಗಾಗಲೇ ಕಾಯ್ದಿರಿಸಲಾಗಿರುವ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸ.ನಂ 92/2 ರಲ್ಲಿರುವ 3.10 ಎಕರೆ ಜಮೀನಿನಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಲು ಅನುಮತಿಯನ್ನು ನೀಡುವಂತೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ ಹಣವನ್ನು ಅನುದಾನ ಬಿಡುಗಡೆ ಮಾಡುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ‌ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಕಾಂಗ್ರೆಸ್ ಮುಖಂಡ ಮುರಳೀಧರ್ ರೈ ಮಟಂತಬೆಟ್ಟು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group