ಭಾರತದ ನಂ. 1 ಶ್ರೀಮಂತ ವ್ಯಕ್ತಿಯಾಗಿ ಗೌತಮ್ ಅದಾನಿ – ಅಂಬಾನಿಯನ್ನು ಹಿಂದಿಕ್ಕಿದ ಅದಾನಿ

(ನ್ಯೂಸ್ ಕಡಬ) newskadaba.com ಮುಂಬೈ, ಆ. 29. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕಿ ಗೌತಮ್ ಅದಾನಿ ಅತ್ಯಂತ ಶ್ರೀಮಂತ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಹುರುನ್ ಇಂಡಿಯಾವು ಅತ್ಯಂತ ಶ್ರೀಮಂತ ಭಾರತೀಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 11.6 ಲಕ್ಷ ಕೋಟಿ ಸಂಪತ್ತನ್ನು ಹೊಂದಿರುವ ಗೌತಮ್ ಅದಾನಿ ಅವರು ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ 2024 ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಭಾರತವು ಏಷ್ಯಾದ ಸಂಪತ್ತು ಸೃಷ್ಟಿ ಇಂಜಿನ್ ಆಗಿ ಹೊರಹೊಮ್ಮುತ್ತಿದೆ. ಚೀನಾ ತನ್ನ ಬಿಲಿಯನೇರ್‌ ಗಳ ಸಂಖ್ಯೆಯಲ್ಲಿ 25% ಕುಸಿತವನ್ನು ಕಂಡರೆ, ಭಾರತವು 29% ಹೆಚ್ಚಳವನ್ನು ಕಂಡಿದೆ. ಭಾರತದಲ್ಲಿ ಬಿಲಿಯನೇರ್‌ ಗಳ ಸಂಖ್ಯೆ ದಾಖಲೆಯ 334ಕ್ಕೆ ತಲುಪಿದೆ ಎಂದು ಹುರುನ್ ಇಂಡಿಯಾದ ಸಂಸ್ಥಾಪಕ ಮತ್ತು ಮುಖ್ಯ ಸಂಶೋಧಕ ಅನಸ್ ರಹಮಾನ್ ಜುನೈದ್ ಹೇಳಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.

Also Read  ಉಪ್ಪಿನಂಗಡಿ : ಮನನೊಂದು ವಿಷ ಸೇವಿಸಿ ಆತ್ಯಹತ್ಯೆ ಗೆ ಶರಣಾದ ವ್ಯಕ್ತಿ

error: Content is protected !!
Scroll to Top