(ನ್ಯೂಸ್ ಕಡಬ) newskadaba.com ಥಾಣೆ, ಆ. 29. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿರುವ ಮಹಾನಗರ ಪಾಲಿಕೆಯ ಶಾಲೆಯೊಂದರಲ್ಲಿ ಬಾಲಕಿಯರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿದ ಆರೋಪದ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯನ್ನು ಮುಝಮ್ಮಿಲ್ ಎಂದು ಗುರುತಿಸಲಾಗಿದ್ದು, ಬುಧವಾರ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಶಿಕ್ಷಕ ತನ್ನ ಮೊಬೈಲ್ ಫೋನ್‌ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿದ್ದು, ಈ ವಿಚಾರವನ್ನು ಬಾಲಕಿಯೊಬ್ಬಳು ತನ್ನ ಪೋಷಕರಿಗೆ ತಿಳಿಸಿದ್ದರಿಂದ ಆತನ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.
Also Read ಉಪ್ಪಿನಂಗಡಿ: ಹುಳವಿದ್ದ ಚಿಕನ್ ನೀಡಿದ್ದಾರೆಂಬ ಆರೋಪ ! ➤ ಹೊಟೇಲ್ ಗೆ ದಾಳಿ ನಡೆಸಿ ಬೀಗ ಜಡಿದ ಅಧಿಕಾರಿಗಳು