(ನ್ಯೂಸ್ ಕಡಬ) newskadaba.com ಉಡುಪಿ, ಫೆ.26. ಪ್ರಾಚೀನ ಕಾಲದ ಜೈನ ತೀರ್ಥಂಕರರ ಕಂಚಿನ ವಿಗ್ರಹಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಐವರನ್ನು ಬಂಧಿಸಿರುವ ಕುಂದಾಪುರ ಪಿಎಸ್ಐ ಹರೀಶ್ ಮತ್ತು ಸಿಬ್ಬಂದಿಗಳು ಜೈನ ತೀರ್ಥಂಕರರ ಐದು ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರಿನ ಪಡೀಲ್ ನಿವಾಸಿ ನೆವೀಲ್ ವಿಲ್ಲಿ ಮಸ್ಕರೇನಸ್, ಶಿವಮೊಗ್ಗ ತಾಳಗುಪ್ಪದ ಅನಿಲ್ ಪುಟಾರ್ಡೋ, ಮಂಗಳೂರಿನ ಕುಲ ಶೇಖರದ ಅಸ್ಟೀನ್ ಸಿಕ್ವೇರಾ, ಕುಂದಾಪುರದ ಜಾನ್ ಮತ್ತು ಅನಿಲಾ ಎಂದು ಗುರುತಿಸಲಾಗಿದೆ. ಕೋಟೇಶ್ವರ ದೇವಸ್ಥಾನ ಬಳಿ ತೀರ್ಥಂಕರರ ಕಂಚಿನ ವಿಗ್ರಹಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಧಾಳಿ ನಡೆಸಿದ ಪೊಲೀಸರು ಐದು ಪುರಾತನ ಜೈನಧರ್ಮದ ತೀರ್ಥಂಕರರ ಕಂಚಿನ ಮೂರ್ತಿಗಳು, ಮಾರುತಿ ಎರ್ಟಿಗಾ ಕಾರು, 57 ಸಾವಿರ ರೂ. ನಗದು, ನೋಟು ಎಣಿಸುವ ಯಂತ್ರ, ನಾಲ್ಕು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.